ETV Bharat / state

ಸಾಗರ ಕೈ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರ ಶಿವರಾಜ್ ಕುಮಾರ್ ಮತಬೇಟೆ - Karnataka assembly election

ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರವಾಗಿ ನಟ ಶಿವರಾಜ್​ಕುಮಾರ್​ ರೋಡ್​ ಶೋ ನಡೆಸಿದರು.

Actor Shivraj Kumar Road Show
ನಟ ಶಿವರಾಜ್​ ಕುಮಾರ್​ ರೋಡ್​ ಶೋ
author img

By

Published : May 2, 2023, 8:13 AM IST

Updated : May 2, 2023, 12:53 PM IST

ಶಿವರಾಜ್ ಕುಮಾರ್ ರೋಡ್ ಶೋ

ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ (ನಿನ್ನೆ) ನಟ ಶಿವರಾಜ್ ಕುಮಾರ್ ರೋಡ್ ಶೋ‌ ನಡೆಸಿ ಕಾಂಗ್ರೆಸ್​ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರವಾಗಿ ಮತ ಯಾಚಿಸಿದರು. ರಿಪ್ಪನ್‌ಪೇಟೆ, ಹೊಸನಗರ ಹಾಗೂ ಸಾಗರದಲ್ಲಿ ಅವರು ರೋಡ್ ಶೋ ನಡೆಸಿದರು. ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಗೀತಾ ಶಿವರಾಜ್ ಕುಮಾರ್, ಕಲಗೋಡು ರತ್ನಾಕರ್ ಸೇರಿದಂತೆ ಇತರರು ಭಾಗಿಯಾಗಿದ್ದರು.

ಶಿವರಾಜ್ ​ಕುಮಾರ್ ಅವರನ್ನು​ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ನೆಚ್ಚಿನ ನಟನನ್ನು ನೋಡಿದ ಅಭಿಮಾನಿಗಳು ಶಿಳ್ಳೆ‌, ಕೇಕೆ ಹಾಕಿದರು. ಶಿವರಾಜ್ ಕುಮಾರ್ ಕೈ ಬೀಸುತ್ತಿದ್ದಂತೆಯೇ ಜನರು ಜೋರಾಗಿ ಕಿರುಚುತ್ತಾ ಹರ್ಷ ವ್ಯಕ್ತಪಡಿಸಿದರು. ಇಂದು ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದಲ್ಲಿ ಶಿವರಾಜ್‌ ಕುಮಾರ್ ಭಾಗಿಯಾಗಲಿದ್ದಾರೆ.

Anita Madhu Bangarappa Vote Campaign
ಅನಿತಾ ಮಧು ಬಂಗಾರಪ್ಪ ಮತ ಪ್ರಚಾರ

ಪತಿ ಪರ ಅನಿತಾ ಮಧು ಬಂಗಾರಪ್ಪ ಕ್ಯಾಂಪೇನ್: ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪನವರ ಪತ್ನಿ ಅನಿತಾ ಮತಪ್ರಚಾರದಲ್ಲಿ ತೊಡಗಿಸಿಕೊಂಡರು. ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ ಮತ ಪ್ರಚಾರ ನಡೆಸಿದರು. ಗ್ರಾಮಗಳಿಗೆ ಭೇಟಿ‌ ನೀಡಿದ ಸಂದರ್ಭದಲ್ಲಿ ಮಹಿಳೆಯರ ಕಷ್ಟ ಸುಖ ಆಲಿಸುತ್ತಾ, ಅವರ ಬಳಿ ಕುಳಿತುಕೊಂಡು ಮಾತನಾಡುತ್ತಿದ್ದುದು ಕಂಡುಬಂತು. ಇದೇ ಸಂದರ್ಭದಲ್ಲಿ ತಮ್ಮ ಪತಿಗೆ ಮತ ನೀಡಿ ತಮ್ಮ ಗ್ರಾಮಗಳ ಅಭಿವೃದ್ದಿಗೆ ಸಹಕಾರ ನೀಡುವಂತೆ ಅವರು ವಿನಂತಿಸಿಕೊಂಡರು. ಜಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲಗಿ ಗ್ರಾಮ, ಚಿಕ್ಕದ್ಯಾವಸ ಹಾಗೂ ಬೆನ್ನೂರು ಗ್ರಾಮ ಪಂಚಾಯತ್ ಮೂಡದಿವಳಿಗೆ ಅವರು ಭೇಟಿ ನೀಡಿದರು.

ಪತಿ ಪರ ಮತ ಪ್ರಚಾರದಲ್ಲಿರುವ ಅನಿತಾ ಮಧು ಬಂಗಾರಪ್ಪ

ಕಾಂಗ್ರೆಸ್ ಅವಧಿಯಲ್ಲಿ ನಡೆದ ಅಭಿವೃದ್ದಿ ಯೋಜನೆಗಳು ಸೇರಿದಂತೆ ತಮ್ಮ ಮಾವ ಎಸ್.ಬಂಗಾರಪ್ಪ ಹಾಗೂ ಶಾಸಕ ಮಧು ಬಂಗಾರಪ್ಪರ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಈ ಬಾರಿ ಕಾಂಗ್ರೆಸ್ ಪಕ್ಷ ನೀಡಿರುವ ಉಚಿತ‌ ಕೊಡುಗೆಗಳ ಬಗ್ಗೆ ತಿಳಿಸಿ ಮಾತಯಾಚನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಂದು ಪ್ರಧಾನಿ ಮೋದಿ 2ನೇ ಹಂತದ ಮತಬೇಟೆ: 3 ಕಡೆ ಸಾರ್ವಜನಿಕ ಸಭೆ, ಕಲಬುರಗಿಯಲ್ಲಿ ರೋಡ್ ಶೋ

Last Updated : May 2, 2023, 12:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.