ETV Bharat / state

ಗುರಿ ಇಟ್ಟು ಕೆಲಸ ಮಾಡಿದ್ರೆ ಸಾಧನೆ ಸಾಧ್ಯ.. ಹೀಗಂತಾ ನಟ ಪ್ರಥಮ್ ಹೇಳಿದರು.. - ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ನಟ ಪ್ರಥಮ್

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಹಿರಿಯರ ಮಾತಿನಂತೆ ನಮ್ಮ ಸಾಧನೆಯೇ ನಮ್ಮ ಗುರುಗಳಿಗೆ ನಾವು ನೀಡಿದ ಗೌರವ ಎಂದರು. ನೂತನ ಚಲನ ಚಿತ್ರ ನಟಭಯಂಕರ ಸಿನಿಮಾ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ..

Actor Pratham visited shimoga
ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ನಟ ಪ್ರಥಮ್​​
author img

By

Published : Sep 6, 2021, 9:15 PM IST

ಶಿವಮೊಗ್ಗ : ವಿದ್ಯೆ ಕಲಿಸಿದ ಗುರುಗಳು ಮುಂದೊಂದು ದಿನ ನಮ್ಮನ್ನು ಕಂಡು ಹೆಮ್ಮೆ ಪಡುವಂತಹ ಪ್ರಜೆಗಳಾಗಿ ಸಮಾಜದಲ್ಲಿ ಬಾಳಬೇಕು. ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ನಟ ಪ್ರಥಮ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಜೆಎನ್ಎನ್​​ಸಿಇ ಕಾಲೇಜಿನಲ್ಲಿ ಎಂಬಿಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ಉತ್ಥಾನ -2021 ಕಾರ್ಯಕ್ರಮಕ್ಕೆ ನಟ ಪ್ರಥಮ್​ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಬಿಡಬಾರದು. ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳಿ, ಆ ಪ್ರಕಾರ ಕೆಲಸ ಮಾಡಿ, ಇದರಿಂದ ಯಶಸ್ಸು ಸಾಧ್ಯವಾಗುತ್ತದೆ ಎನ್ನುವುದಕ್ಕೆ ತಮ್ಮದೇ ಉದಾಹರಣೆ ಕೊಟ್ಟರು.

ತಾನು ಸಮಾಜದಿಂದ ಬಹಳಷ್ಟು ಪಡೆದಿದ್ದೇನೆ. ಅದಕ್ಕಾಗಿ ಈಗ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಕೋವಿಡ್ ಕಾಲದಲ್ಲಿ ಸುಮಾರು 5 ಸಾವಿರ ಆಹಾರದ ಕಿಟ್ ವಿತರಿಸಿದ್ದೇನೆ. ನನ್ನ ಪ್ರತಿ ಸಾರ್ವಜನಿಕ ಕಾರ್ಯಕ್ರಮದ ಹಣವನ್ನು ಮಂಗಳೂರಿನಲ್ಲಿ ನಡೆಯುತ್ತಿರುವ ಏಡ್ಸ್ ಪೀಡಿತರ ಚಿಕಿತ್ಸಾ ಸಂಸ್ಥೆಯೊಂದಕ್ಕೆ ನೀಡುತ್ತಿದ್ದೇನೆ ಎಂದರು.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಹಿರಿಯರ ಮಾತಿನಂತೆ ನಮ್ಮ ಸಾಧನೆಯೇ ನಮ್ಮ ಗುರುಗಳಿಗೆ ನಾವು ನೀಡಿದ ಗೌರವ ಎಂದರು. ನೂತನ ಚಲನ ಚಿತ್ರ ನಟಭಯಂಕರ ಸಿನಿಮಾ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಉಪೇಂದ್ರ ಅವರು ಸಿನಿಮಾ ಹಾಡಿಗೆ ಧ್ವನಿ ನೀಡಿದ್ದಾರೆ. ಇದಾದ ನಂತರ ಮಾತನಾಡಿದ ಡ್ರೋಣ್ ಪ್ರಥಮ್, ತಾನು ಸಿನಿಮಾ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಬಿಗ್​​ಬಾಸ್​​ನಲ್ಲಿ ಗೆದ್ದ ಹಣವನ್ನು ಯೋಧರ ಕುಟುಂಬಗಳಿಗೆ ಅರ್ಪಿಸಲು ನಿಶ್ಚಯ ಮಾಡಲಾಗಿತ್ತು. ಅದರಂತೆ ನಮ್ಮ ತಂಡದ ಸದಸ್ಯರ ಸಹಕಾರದಿಂದ ಯೋಧರ ಮತ್ತು ರೈತರ ಕುಟುಂಬಗಳಿಗೆ ಸಹಾಯ ಮಾಡಿದ ತೃಪ್ತಿ ನನಗಿದೆ. 75 ವರ್ಷಗಳನ್ನು ಪೂರೈಸಿರುವ ಕನ್ನಡ ಚಿತ್ರರಂಗ ನಮ್ಮೆಲ್ಲರ ಹೆಮ್ಮೆ. ಕನ್ನಡ ಸಿನಿಮಾಗಳನ್ನು ಚಿತ್ರಮಂದಿಗಳಲ್ಲಿಯೇ ನೋಡಿ ಕಲಾವಿದರನ್ನು, ಚಿತ್ರರಂಗವನ್ನು ಬೆಳೆಸಿ ಎಂದು ಮನವಿ ಮಾಡಿದರು.

ಓದಿ: ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ MBBS ವಿದ್ಯಾರ್ಥಿನಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.