ಶಿವಮೊಗ್ಗ: ಹೊಸನಗರ ತಾಲೂಕಿನ ಸಾರ್ವಜನಿಕ ಅಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಮಹಿಳೆಯೊಬ್ಬರಿಗೆ ಸಿಸೇರಿಯನ್ ಮೂಲಕ ಹರಿಗೆ ಮಾಡಿಸಿದ್ದು, ಹೆಣ್ಣು ಮಗುವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಲಾಗಿದೆ.
ಈ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈವರೆಗೆ ಶಸ್ತ್ರಚಿಕಿತ್ಸೆ ಹೆರಿಗೆಗೆ ಉತ್ತಮ ಸೌಲಭ್ಯ ಲಭ್ಯವಿಲ್ಲದ ಕಾರಣ ಗರ್ಭಿಣಿಯರು ಪಕ್ಕದ ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ಆಸ್ಪತ್ರೆಗಳಿಗೆ ತೆರಳುತ್ತಿದ್ದರು.
ಆದರೆ ರಿಪ್ಪನ್ ಪೇಟೆ ಭಾಗದ ಗರ್ಭಿಣಿ ಸ್ತ್ರೀಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಸಾಮಾನ್ಯ ಹೆರಿಗೆ ಕಷ್ಟಸಾಧ್ಯವಾಗಿದೆ, ಅವರಿಗೆ ಆಸ್ಪತ್ರೆ ವೈದ್ಯ ಸಿಬ್ಬಂದಿಗಳು ಸಿಸೇರಿಯನ್ ನಡೆಸಿ ಹೆಣ್ಣು ಮಗುವನ್ನು ಹೊರ ತಗೆದಿದ್ದಾರೆ. ಹೆಣ್ಣು ಮಗು ಆರೋಗ್ಯವಾಗಿದ್ದು, ಮೂರುವರೆ ಕೆ.ಜಿ ತೂಕವಿದೆ ಎಂದು ತಿಳಿದುಬಂದಿದೆ.
ಹೊಸನಗರ ಸಾರ್ವಜನಿಕ ಆಸ್ಪತ್ರೆ ಈಗ ಸುಸಜ್ಜಿತವಾಗಿದ್ದು, ಆಸ್ಪತ್ರೆ ಎಲ್ಲ ವಿಭಾಗಕ್ಕೆ ವೈದ್ಯ ಸಿಬ್ಬಂದಿಗಳು ನೇಮಕಗೊಂಡಿರುವುದು ಈ ಭಾಗದ ಜನರ ಪಾಲಿಗೆ ಒಂದು ವರವಾಗಿ ಪರಿಣಮಿಸಿದೆ.