ಶಿವಮೊಗ್ಗ: ನ್ಯಾಯಕ್ಕಾಗಿ ಆಗ್ರಹಿಸಿ ವ್ಯಕ್ತಿಯೊಬ್ಬ ತನ್ನ ಬೈಕ್ಗೆ ತಾನೇ ಬೆಂಕಿ ಹಚ್ಚಿರುವ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದಿದೆ. ಅಂಬೇಡ್ಕರ್ ನಗರದ ನಿವಾಸಿ ರಾಜು ಎಂಬಾತ ಬೈಕ್ಗೆ ಬೆಂಕಿ ಇಟ್ಟಿರುವ ಆರೋಪಿ.
ಅಂಬೇಡ್ಕರ್ ನಗರದಲ್ಲಿ ಮಳೆಗಾಲದಲ್ಲಿ ನೀರು ನಿಂತು ಜನರು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಅಲ್ಲಿಯ ಜನರನ್ನು ಬೇರೊಂದು ಪ್ರದೇಶಕ್ಕೆ ಸ್ಥಳಾಂತರ ಆಗುವಂತೆ ಮತ್ತು ಸ್ಥಳಾಂತರವಾದ ಪ್ರದೇಶದ ಹಕ್ಕು ಪತ್ರಗಳನ್ನು ನೀಡುವುದಾಗಿ ಸೂಚಿಸಿತ್ತು. ಅದರಂತೆ ಅಲ್ಲಿಯ ಜನರು ಬೇರೊಂದು ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು. ಕೆಲವರಿಗೆ ಮಾತ್ರ ಹಕ್ಕು ಪತ್ರಗಳನ್ನು ದೊರೆತಿದ್ದು ಮತ್ತೆ ಕೆಲವರಿಗೆ ಹಕ್ಕಪತ್ರ ನೀಡಿರಲಿಲ್ಲ.
ಇನ್ನು, ಇದೇ ವಿಚಾರವಾಗಿ ಇಂದು ರಾಜು, ಜಿಲ್ಲಾಧಿಕಾರಿ ಕಚೇರಿ ಎದುರು ತನಗೆ ಹಕ್ಕು ಪತ್ರ ನೀಡುವ ವಿಚಾರದಲ್ಲಿ ಅನ್ಯಾಯವಾಗಿ ಎಂದು ಆರೋಪಿಸಿ ಡಿಸಿ ಅವರೊಂದಿಗೆ ಮಾತನಾಡಲು ಬಿಡಿ ಎಂದು ಕಚೇರಿಯ ಸಿಬ್ಬಂದಿಯನ್ನು ಮನವಿ ಮಾಡಿಕೊಂಡಿದ್ದಾನೆ. ಇದಕ್ಕೆ ಸಿಬ್ಬಂದಿಗಳು ಅನುಮತಿ ಕೊಡದ ಹಿನ್ನೆಲೆ ಕೋಪಗೊಂಡ ರಾಜು ಡಿಸಿ ಕಚೇರಿ ಮುಂದೆ ಬೈಕ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಸಿದ್ದಾನೆ. ಇನ್ನು, ಕಚೇರಿ ಬಳಿ ಇದ್ದಂತ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ. ಘಟನೆ ಸಂಬಂಧ ರಾಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ: ಆರೋಪಿ ಬಂಧನ