ಶಿವಮೊಗ್ಗ : ಕೆನಾರಾ ಬ್ಯಾಂಕ್ಗೆ ಕೇವಲ 3.ರೂ.46 ಪೈಸೆ ಸಾಲ ಮರುಪಾವತಿ ಮಾಡಲು ರೈತನೊಬ್ಬ 15 ಕಿ.ಮೀ ದೂರ ನಡೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ರೈತ ಲಕ್ಷ್ಮಿ ನಾರಾಯಣ ಅಮಡೆ ಎಂಬುವವರು ಸಾಲ ಮರುಪಾವತಿಸಲು ಅಮಡೆ ಗ್ರಾಮದಿಂದ 15 ಕಿ.ಮೀ ದೂರದ ನಿಟ್ಟೂರಿನ ಬ್ಯಾಂಕ್ ಶಾಖೆಗೆ ಹೋಗಿ ಸಾಲ ಮರು ಪಾವತಿ ಮಾಡಿದ್ದಾರೆ.
ಇವರು ಕೆನರಾ ಬ್ಯಾಂಕ್ನಲ್ಲಿ 35 ಸಾವಿರ ರೂ. ಬೆಳೆ ಸಾಲ ಮಾಡಿದ್ದರು. ಇದರಲ್ಲಿ 32 ಸಾವಿರ ರೂ. ಸಾಲ ಮನ್ನಾ ಯೋಜನೆಯಡಿ ಮನ್ನಾ ಆಗಿತ್ತು. ಉಳಿದ 3 ಸಾವಿರ ರೂಗಳನ್ನು ಬಡ್ಡಿ ಸಮೇತ ವಾಪಸ್ ಮಾಡಿದ್ದರು. ಆದರೆ, ಕಳೆದ ಗುರುವಾರ ಬ್ಯಾಂಕ್ನಿಂದ ಫೋನ್ ಮಾಡಿ ತಕ್ಷಣ ನೀವು ಬ್ಯಾಂಕ್ಗೆ ಬಂದು ಹೋಗಿ ಎಂದು ತಿಳಿಸಿದ್ದಾರೆ. ಹಾಗಾಗಿ ರೈತ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ನೀವು ನಿಮ್ಮ ಸಾಲದಲ್ಲಿ 3.46 ರೂ. ಬಾಕಿ ಇದೆ ಅದನ್ನು ಕಟ್ಟಿ ಎಂದು ಹೇಳಿದ್ದಾರೆ.
ಇದನ್ನು ಫೋನ್ನಲ್ಲಿಯೇ ಹೇಳಿದ್ದರೆ ನಿಟ್ಟೂರಿನಲ್ಲಿನ ತನ್ನ ಸ್ನೇಹಿತರಿಂದ ಹಣ ಕಟ್ಟಿಸುತ್ತಿದ್ದೆ. ಹಿಂದೆ ಸಾಲದ ಬಡ್ಡಿ ಕಟ್ಟಲು ಬಂದಾಗ ಹೇಳಿದ್ರೆ ಅಂದೇ ಕಟ್ಟುತ್ತಿದ್ದೆ. ಆದರೆ, ಬ್ಯಾಂಕ್ನವರು ಅರ್ಜೆಂಟ್ ಬಂದು ಹೋಗಿ ಎಂದು ಕರೆದು ಈಗ 3. 46 ರೂ. ಸಾಲ ಕಟ್ಟಿ ಎಂದಿದ್ದು ಎಷ್ಟು ಸರಿ ಎಂದು ರೈತ ಬ್ಯಾಂಕ್ ವಿರುದ್ದ ಅಸಮಾಧಾನ ಹೊರ ಹಾಕಿದ್ರು.