ಶಿವಮೊಗ್ಗ: ಕೊರೊನಾ ಲಾಕ್ಡೌನ್ನಿಂದ ತಾನು ಬೆಳೆದ ಅನಾನಸ್ ಬೆಳೆಗೆ ಮಾರುಕಟ್ಟೆ ಸಿಗದೆ ರೈತನೋರ್ವ ತನ್ನ ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕಾತುವಳ್ಳಿಯಲ್ಲಿ ನಡೆದಿದೆ.
ಕಾತುವಳ್ಳಿಯ ಮಲ್ಲಪ್ಪ ಮೃತ ದುರ್ದೈವಿ ಎನ್ನಲಾಗಿದೆ. ಮಲ್ಲಪ್ಪ ರೈತ ಸಣ್ಣ ರೈತನಾಗಿದ್ದು ತನ್ನ 4 ಎಕರೆ ಭೂಮಿಯಲ್ಲಿ 80 ಟನ್ ಅನಾನಸ್ ಬೆಳೆದಿದ್ದರು. ಕೊರೊನಾ ಲಾಕ್ಡೌನ್ನಿಂದ ಅನಾನಸ್ ಬೆಳೆಗೆ ಮಾರುಕಟ್ಟೆ ಸಿಗದೆ ಬೇರೆ ಎಲ್ಲೂ ಕಳುಹಿಸಲಾಗದೆ ಅನಾನಸ್ ಹೊಲದಲ್ಲಿಯೇ ಕೊಳೆತು ಹೋಗಿದೆ. ಇದರಿಂದ ಬೇಸರಗೊಂಡ ರೈತ ಮಲ್ಲಪ್ಪ ಹೊಲದಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ರೈತನಿಗೆ ಪತ್ನಿ ಇದ್ದಾರೆ ಹಾಗೂ ಕಳೆದ 6 ತಿಂಗಳ ಹಿಂದೆ ಮಗ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದ. ಮಲ್ಲಪ್ಪನ ಆತ್ಮಹತ್ಯೆ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.