ಶಿವಮೊಗ್ಗ: ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮದ ನಿವಾಸಿಗಳಾದ ಜಯಶೀಲನ್ ಮತ್ತು ಶ್ರೀಮತಿ ಜಯಮ್ಮ ಎಂಬುವರು ತಮ್ಮ ಕುಟುಂಬದ ಸಮೇತ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.
ಜಯಶೀಲನ್ ಅವರ ಕುಟುಂಬ ಮೂಲತಃ ಹಿಂದೂ ಧರ್ಮದವರು. ಇವರ ತಂದೆ ಏಳುಮಲೈ ಅವರು 1980ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದರಂತೆ. ನಂತರ ಕುಟುಂಬದವರು ಯಾರೂ ಸಹ ಚರ್ಚ್ಗೆ ಹೋಗದೆ, ಹಿಂದೂ ಧರ್ಮದ ಆಚರಣೆಯನ್ನೇ ಅನುಸರಿಸುತ್ತಿದ್ದರು ಎನ್ನಲಾಗ್ತಿದೆ.
ಇದರಿಂದ ಭದ್ರಾವತಿಯ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಂಡರು ಜಯಶೀಲನ್ ಹಾಗೂ ಜಯಮ್ಮ ಅವರ ಕುಟುಂಬದವರೊಡನೆ ಮಾತನಾಡಿ, ಅವರ ಕುಟುಂಬ ಸದಸ್ಯರಾದ ಪ್ರಭಾಕರನ್, ಅವರ ಪತ್ನಿ ಲಲಿತಾ ಪ್ರಭಾಕರನ್ ಹಾಗು ಮಕ್ಕಳಾದ ಭರತ್ ಕುಮಾರ್, ಭಾವನಾ, ದ್ವಿತೀಯ ಪುತ್ರ ಪ್ರಕಾಶ್ ಮತ್ತು ಶ್ವೇತಾ ಪ್ರಕಾಶ್ ಹಾಗು ಪುತ್ರಿ ಪೃಥ್ವಿ ಅವರು ಇಂದು ಪುನಃ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ.
ಘರ್ ವಾಪಸಿ ಕಾರ್ಯಕ್ರಮವು ಭದ್ರಾವತಿ ಜನ್ನಾಪುರದ ಸಾರ್ವಜನಿಕ ರಾಮಭಜನಾ ಮಂದಿರದಲ್ಲಿ ನಡೆಯಿತು. ಘರ್ ವಾಪಸಿಯನ್ನು ಕೃಷ್ಣಮೂರ್ತಿ ಸೋಮಯಾಜಿ, ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದಾರೆ. ಈ ವೇಳೆ ವಿಶ್ವಹಿಂದೂ ಪರಿಷತ್ತಿನ ಪ್ರಮುಖರಾದ ಹಾ. ರಾಮಪ್ಪ, ಡಿ. ಆರ್ ಶಿವಕುಮಾರ್, ವೈ. ಎಸ್, ರಾಮಮೂರ್ತಿ, ಎಸ್. ನಾರಾಯಣ್, ಪಿ. ಮಂಜುನಾಥ್ ರಾವ್, ಶೈಲೇಶ್ ಕೋಟಿ, ಸಿ. ಮಹೇಶ್ವರಪ್ಪ ಶಿವಮೂರ್ತಿ ಹಾಜರಿದ್ದರು.
ಓದಿ: ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೆ ಮಾರ್ಗಸೂಚಿ ಬಿಡುಗಡೆ: ಯಾವುದಕ್ಕೆ ನಿರ್ಬಂಧ?