ETV Bharat / state

ಶಿವಮೊಗ್ಗದಲ್ಲಿ 96 ಮಂದಿಗೆ ಸೋಂಕು, ಮೂವರು ಬಲಿ - ಶಿವಮೊಗ್ಗ ಕೊರೊನಾ ನ್ಯೂಸ್

96 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 1,823ಗೆ ತಲುಪಿದೆ. ಸೋಂಕಿನಿಂದ ಮೂವರು ಸಾವನ್ನಪ್ಪಿದ್ದಾರೆ.

Shimogga corona case
Shimogga corona case
author img

By

Published : Jul 31, 2020, 10:47 PM IST

ಶಿವಮೊಗ್ಗ: ಡೆಡ್ಲಿ ಕೊರೊನಾಗೆ ಮೂವರು ಕೊನೆಯುಸಿರೆಳೆದಿದ್ದಾರೆ ಹಾಗೂ 96 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಶಿವಮೊಗ್ಗದಲ್ಲಿ 62, ಭದ್ರಾವತಿ 15, ಸೊರಬ 3, ಶಿಕಾರಿಪುರ‌ 9, ಸಾಗರ 3, ಹೊಸನಗರ 1 ಹಾಗು ಬೇರೆ ಜಿಲ್ಲೆಗಳಿಂದ ಬಂದ 3 ಮಂದಿಗೆ ವೈರಸ್ ವಕ್ಕರಿಸಿದೆ‌.

ಮೂವರು ಸೋಂಕಿತರು ಸಾವನ್ನಪ್ಪುವ ಮೂಲಕ ಜಿಲ್ಲೆಯಲ್ಲಿ ಸೋಂಕಿಗೆ 34 ಜನ ಬಲಿಯಾಗಿದ್ದಾರೆ. ಜೊತೆಗೆ ಆಸ್ಪತ್ರೆಯಿಂದ 78 ಜನ ಇಂದು ಬಿಡುಗಡೆ ಹೊಂದಿದ್ದಾರೆ. ಒಟ್ಟು 1,003 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಸದ್ಯ ಆಸ್ಪತ್ರೆಯಲ್ಲಿ‌ 786 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 227 ಜನ, ಕೋವಿಡ್ ಕೇರ್ ಸೆಂಟರ್‌ನಲ್ಲಿ 446 ಜನ, ಖಾಸಗಿ ಆಸ್ಪತ್ರೆಯಲ್ಲಿ 42 ಜನ ಚಿಕಿತ್ಸೆಗೊಳಪಟ್ಟಿದ್ದಾರೆ. ಮನೆಯಲ್ಲಿ 71 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 362 ಕಡೆ ಕಂಟೈನ್‌ಮೆಂಟ್‌ ಝೋನ್ ಮಾಡಲಾಗಿದೆ‌. ಇದರಲ್ಲಿ 97 ಕಂಟೈನ್‌ಮೆಂಟ್‌ ಝೋನ್‌ ಅನ್ನು ವಿಸ್ತರಣೆ ಮಾಡಲಾಗಿದೆ.

ಇಂದು 537 ಜನರ ಸ್ವಾಬ್ ತೆಗೆಯಲಾಗಿದ್ದು, 491 ನೆಗೆಟಿವ್ ವರದಿ ಬಂದಿದೆ. ಇದುವರೆಗೂ 27,566 ಜನರ ಸ್ವಾಬ್ ತೆಗೆಯಲಾಗಿದ್ದು, ಒಟ್ಟು 24,390 ಜನರ ಫಲಿತಾಂಶ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.