ಶಿವಮೊಗ್ಗ: ನಾಡಬಾಂಬ್ ಸ್ಫೋಟಗೊಂಡು ಓರ್ವ ಗಂಭೀರವಾಗಿ ಗಾಯಗೊಂಡಿದ್ದು, 8 ಮಂದಿಗೆ ಸಣ್ಣ-ಪುಟ್ಟ ಗಾಯವಾಗಿರುವ ಘಟನೆ ತಾಲೂಕಿನ ಕುಂಚೇನಹಳ್ಳಿ ತಾಂಡಾದಲ್ಲಿ ನಡೆದಿದೆ. ಕಾಡಂದಿ ಸೇರಿದಂತೆ ಇತರೆ ಪ್ರಾಣಿಗಳನ್ನು ಕೊಲ್ಲಲು ಕಚ್ಚ ಬಾಂಬ್ ಅಥವಾ ನಾಡಬಾಂಬ್ ಬಳಸುತ್ತಾರೆ. ನಾಡಬಾಂಬ್ ಅನ್ನು ಒಣಗಲು ಹಾಕುವಾಗ ಸ್ಟೋಟಗೊಂಡಿದೆ.
ಘಟನೆಯಲ್ಲಿ ತಮಿಳು ಕುಮಾರ ಎಂಬಾತನಿಗೆ ಗಂಭೀರ ಗಾಯವಾಗಿದೆ. ಈತನ ಜೊತೆ ಇತರೆ 8 ಜನರಿಗೆ ಗಾಯವಾಗಿದೆ. ತಮಿಳು ಕುಮಾರನ ಮನೆಯಲ್ಲಿ ನಾಡಬಾಂಬ್ ಸಂಗ್ರಹಿಸಲಾಗಿತ್ತು. ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.