ETV Bharat / state

ಶಿವಮೊಗ್ಗದಲ್ಲಿ‌ 500ರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ - ಶಿವಮೊಗ್ಗ ಕೊರೊನಾ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ 74 ಕೊರೊನಾ ಪಾಸಿಟಿವ್​​ ಪ್ರಕರಣ ಪತ್ತೆಯಾಗಿವೆ. ಸದ್ಯ‌ 313 ಜನ ಸೋಂಕಿನಿಂದ ಶಿವಮೊಗ್ಗದ ಮೆಗ್ಗಾನ್ ಕೋವಿಡ್ ಆಸ್ಪತ್ರೆ ಹಾಗೂ ಗಾಜನೂರಿನ ಮೂರಾರ್ಜಿ ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

74-new-corona-cases-in-shivamogga
ಕೊರೊನಾ
author img

By

Published : Jul 14, 2020, 3:51 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 74 ಕೊರೊನಾ ಪಾಸಿಟಿವ್​​ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 520ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ ಯಾರೂ ಸಹ ಬಿಡುಗಡೆಯಾಗಿಲ್ಲ.‌

ಜಿಲ್ಲೆಯಲ್ಲಿ ಇದುವರೆಗೂ 197 ಜನ ಸೊಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ‌ 313 ಜನ ಸೋಂಕಿನಿಂದ ಶಿವಮೊಗ್ಗದ ಮೆಗ್ಗಾನ್ ಕೋವಿಡ್ ಆಸ್ಪತ್ರೆ ಹಾಗೂ ಗಾಜನೂರಿನ ಮೂರಾರ್ಜಿ ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೊ 10 ಜನ ಸಾವನ್ನಪ್ಪಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ ಪತ್ತೆಯಾದ ಪ್ರಕರಣದಲ್ಲಿ ದ್ವಿತೀಯ ಸಂಪರ್ಕದಿಂದ 34 ಜನಕ್ಕೆ, ಸಂಪರ್ಕವೇ ಇಲ್ಲದೆ 10 ಜನಕ್ಕೆ, ಅಂತರ ಜಿಲ್ಲೆ ಪ್ರಯಾಣದಿಂದ 2 ಜನಕ್ಕೆ, ಐಎಲ್​ಐನಿಂದ 28 ಜನರಲ್ಲಿ ಕೊರೊನಾ‌ ಪಾಸಿಟಿವ್ ಕಂಡು ಬಂದಿದೆ. ಜಿಲ್ಲೆಯಲ್ಲಿ 8 ಜನರು ಖಾಸಗಿ‌ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದಾರೆ.

124 ಕಂಟೈನ್ಮೆಂಟ್ ಜೋನ್ ರಚನೆಯಾಗಿದ್ದು, ಜಿಲ್ಲೆಯಲ್ಲಿ ಜಿಲ್ಲಾಡಳಿತ 353 ಜನರ ಸ್ವಾಬ್ ಪರೀಕ್ಷೆಗೆ ತೆಗೆದುಕೊಂಡಿದೆ. ಇದುವರೆಗೂ 21,298 ಜನರಿಗೆ ಸ್ವಾಬ್ ಪರೀಕ್ಷೆಗೆ ತೆಗೆಯಲಾಗಿದ್ದು, ಇದುವರೆಗೂ 19,931 ಜನರ ವರದಿ ಬಂದಿದ್ದು, ಇನ್ನೂ 568 ಜನರದ್ದು ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.