ETV Bharat / state

ಸೈಬರ್ ವಂಚಕರು ಎಗರಿಸಿದ್ದ 57 ಲಕ್ಷ ರೂ ಹಣ 2 ವರ್ಷದ ಬಳಿಕ ವಾಪಸ್ ಪಡೆದ ಬ್ಯಾಂಕ್!

author img

By

Published : Apr 9, 2021, 11:03 PM IST

Updated : Apr 10, 2021, 4:21 AM IST

ಸೈಬರ್ ವಂಚಕರು ಎಗರಿಸಿದ್ದ 57 ಲಕ್ಷ ರೂ ನಗದನ್ನು 2 ವರ್ಷದ ಬಳಿಕ ಶಿರಾಳಕೊಪ್ಪದ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್​ ವಾಪಸ್ ಪಡೆದಿದೆ.

cdas
ಸೈಬರ್ ವಂಚಕರು ಎಗರಿಸಿದ್ದ 57 ಲಕ್ಷ ರೂ ಹಣ 2 ವರ್ಷದ ಬಳಿಕ ವಾಪಸ್ ಪಡೆದ ಬ್ಯಾಂಕ್!

ಶಿವಮೊಗ್ಗ: ಸೈಬರ್​ ವಂಚಕರು 2 ವರ್ಷದ ಹಿಂದೆ ಎಗರಿಸಿದ್ದ 57 ಲಕ್ಷದ 70 ಸಾವಿರ ರೂ ಗಳನ್ನು ಶಿರಾಳಕೊಪ್ಪದ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದೆ.

ತಮ್ಮ ಬ್ಯಾಂಕ್​ ಹಣ ಕಳೆದುಕೊಂಡಿದ್ದ ಬಗ್ಗೆ​ ಬ್ಯಾಂಕ್ ಮಂಗಳೂರಿನ ಅದಾಲತ್ ನಲ್ಲಿ ಪ್ರಕರಣ ದಾಖಲಿಸಿತ್ತು. ಅಲ್ಲಿ ವಾದ - ವಿವಾದ ನಡೆದು ಕೊನೆಗೆ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್​ ಹಣವನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಸವೇಶ್ವ ಪಟ್ಟಣ ಸಹಕಾರ ಬ್ಯಾಂಕ್​ನವರು ತಮ್ಮ ವಿಳಾಸ ನೀಡಿ ಬಿಎಸ್ಎನ್ಎಲ್ ಸಿಮ್ ಪಡೆದುಕೊಂಡಿದ್ದರು.

ನಂತರ ಸೈಬರ್ ವಂಚಕ ಬ್ಯಾಂಕ್​ನ ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡಿ ಬಿಎಸ್ಎನ್ಎಲ್​ ನಕಲಿ ಸಿಮ್ ಪಡೆದು ಹಣ ವರ್ಗಾಯಿಸಿಕೊಂಡಿದ್ದ.‌ ಈ ಕುರಿತು ತನಿಖೆ ನಡೆದು ಬ್ಯಾಂಕ್ ಯಾವುದೇ ತಪ್ಪನ್ನು ಎಸಗಿಲ್ಲ ಎಂದು ತಿಳಿದು ಹಣ ವಾಪಸ್ ನೀಡಿದೆ. ಬಿಎಸ್ಎನ್ಎಲ್ ಮಾಡಿದ ಸಣ್ಣ ಯಡವಟ್ಟು ಬ್ಯಾಂಕ್ ಎರಡು ವರ್ಷ ಕೆಟ್ಟ ಹೆಸರನ್ನು ಪಡೆಯುವಂತಾಗಿತ್ತು. ಸದ್ಯ ತನಿಖೆಯ ನಂತರ ಹಣ ವಾಪಸ್ ಆಗಿರುವುದು ಬ್ಯಾಂಕ್ ಆಡಳಿತ ಮಂಡಳಿಗೂ ಹಾಗೂ ಬ್ಯಾಂಕ್ ಸಿಬ್ಬಂದಿಗೆ ನಿರಾಳತೆ ತಂದಿದೆ.

Last Updated : Apr 10, 2021, 4:21 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.