ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ-ದಿನೆ ಉಲ್ಬಣಗೊಳ್ಳುತ್ತಲೇ ಇದ್ದು ಇಂದು 291 ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 5057ಕ್ಕೆ ಏರಿಕೆಯಾಗಿದೆ.
ತಾಲೂಕುವಾರು ಸೋಂಕು ಪ್ರಕರಣಗಳು:
ಶಿವಮೊಗ್ಗ-158, ಭದ್ರಾವತಿ-56, ಶಿಕಾರಿಪುರ-27, ತೀರ್ಥಹಳ್ಳಿ-06, ಹೊಸನಗರ-01, ಸೊರಬ-18, ಸಾಗರ-13, ಬೇರೆ ಜಿಲ್ಲೆಯಿಂದ ಬಂದ 12 ಜನರಲ್ಲಿ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ.
ಮೃತ ಪ್ರಕರಣಗಳು:
ಸೋಂಕಿಗೆ ತುತ್ತಾಗಿ ಇಬ್ಬರು ಇಂದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 81 ಸೋಂಕಿತರು ಮೃತಪಟ್ಟಿದ್ದಾರೆ.
ಗುಣಮುಖ:
ಇಂದು 72 ಜನ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 2,950 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಸಕ್ರಿಯ ಪ್ರಕರಣಗಳು:
ಸದ್ಯ ಜಿಲ್ಲೆಯಲ್ಲಿ 2026 ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ. ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 237, ಕೋವಿಡ್ ಕೇರ್ ಸೆಂಟರ್ ನಲ್ಲಿ 975, ಆರ್ಯವೇದಿಕ್ ಕಾಲೇಜಿನಲ್ಲಿ 128, ಖಾಸಗಿ ಆಸ್ಪತ್ರೆಯಲ್ಲಿ 247 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ 439 ಸೋಂಕಿತರು ಐಸೋಲೇಷನ್ ಆಗಿದ್ದಾರೆ. ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 1939ಕ್ಕೆ ಏರಿಕೆಯಾಗಿದೆ, ಇದರಲ್ಲಿ 682 ಝೋನ್ ಗಳು ವಿಸ್ತರಣೆಯಾಗಿದೆ.
ಕೋವಿಡ್ ಪರೀಕ್ಷೆ:
ಇಂದು 1,928 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 1,049 ಜನರ ವರದಿ ಬಂದಿದೆ. ಇದುವರೆಗೂ 45,725 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು 35,898 ಜನರ ವರದಿ ಬಂದಿದೆ.