ಶಿವಮೊಗ್ಗ: ಜಿಲ್ಲೆಯಲ್ಲಿ ಇವತ್ತೂ ಕೂಡಾ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಇನ್ನೂರರ ಗಡಿ ದಾಟಿದೆ. ಒಂದೇ ದಿನ 262 ಸೋಂಕಿತರು ಪತ್ತೆಯಾಗಿದ್ದು ಇಬ್ಬರು ಬಲಿಯಾಗಿದ್ಧಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,757ಕ್ಕೆ ಏರಿದರೆ, ಸಾವಿಗೀಡಾಗಿದವರ ಸಂಖ್ಯೆ 68ಕ್ಕೆ ತಲುಪಿದೆ.
ಇದಲ್ಲದೆ ಇಂದು 178 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 2,431 ತಲುಪಿದೆ.
ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 222 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಕೇರ್ನಲ್ಲಿ 529 ಜನ, ಖಾಸಗಿ ಆಸ್ಪತ್ರೆಯಲ್ಲಿ 208, ಆಯುರ್ವೇದ ಕಾಲೇಜಿನಲ್ಲಿ 80 ಮಂದಿ ಸೋಂಕಿತರಿದ್ದಾರೆ. ಅಲ್ಲದೆ 219 ಮಂದಿ ಮನೆಯಲ್ಲಿಯೇ ಐಸೊಲೇಷನ್ ಆಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 1,258 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಕಂಟೈನ್‌ಮೆಂಟ್ ಝೋನ್‌ಗಳ ಸಂಖ್ಯೆ 1,622ಕ್ಕೆ ಏರಿಕೆಯಾಗಿದೆ. ಇದರಲ್ಲಿ 541 ವಿಸ್ತರಣೆಗೊಂಡಿವೆ.
ತಾಲೂಕುವಾರು ಸೋಂಕಿತರ ವಿವರ:
ಶಿವಮೊಗ್ಗ- 67
ಭದ್ರಾವತಿ - 59
ಶಿಕಾರಿಪುರ - 110
ಸಾಗರ - 11
ತೀರ್ಥಹಳ್ಳಿ - 04
ಹೊಸನಗರ - 02
ಇತರೆ ಜಿಲ್ಲೆಯಿಂದ 7 ಜನ ಬಂದಿದ್ದಾರೆ.
ಇಂದು 1,542 ಜನರನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 908 ಮಂದಿಯ ವರದಿ ಬಂದಿದೆ. ಜಿಲ್ಲೆಯಲ್ಲಿ ಇದುವರೆಗೂ 39,194 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದುವರೆಗೂ 32,293 ಜನರ ವರದಿ ಬಂದಿದೆ.