ಶಿವಮೊಗ್ಗ: ಕೊರೊನಾ ಸೋಂಕು ಪ್ರಕರಣಗಳು ದಿನೇ-ದಿನೆ ಏರಿಕೆಯಾಗುತ್ತಲೇ ಇದ್ದು, ಇಂದು 262 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3757ಕ್ಕೆ ತಲುಪಿದೆ.
ಸೋಂಕು ಪ್ರಕರಣಗಳು:
ಶಿವಮೊಗ್ಗ ತಾಲೂಕಿನಲ್ಲಿ 103, ಭದ್ರಾವತಿಯಲ್ಲಿ 34, ಶಿಕಾರಿಪುರದಲ್ಲಿ 71, ಸಾಗರದಲ್ಲಿ 1, ತೀರ್ಥಹಳ್ಳಿಯಲ್ಲಿ 2, ಹೊಸನಗರದಲ್ಲಿ 5,
ಸೊರಬದಲ್ಲಿ 1 ಪ್ರಕರಣ ಸೇರಿದಂತೆ ಬೇರೆ ಜಿಲ್ಲೆಯಿಂದ ಬಂದ 6 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಮೃತ ಪ್ರಕರಣಗಳು:
ಕೊರೊನಾ ಸೋಂಕಿಗೆ ಇಂದು ಇಬ್ಬರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 68 ಸೋಂಕಿತರು ಮೃತಪಟ್ಟಿದ್ದು ಆತಂಕ ಮನೆ ಮಾಡಿದೆ.
ಗುಣಮುಖ:
ಇಂದು 178 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 2431 ಮಂದಿ ಕೊರೊನಾ ಗೆದ್ದು ಬಂದಿದ್ದಾರೆ.
ಸಕ್ರಿಯ ಪ್ರಕರಣಗಳು:
ಸದ್ಯ ಜಿಲ್ಲೆಯಲ್ಲಿ 1258 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 238 ಸೋಂಕಿತರು, ಕೋವಿಡ್ ಕೇರ್ ನಲ್ಲಿ 642, ಖಾಸಗಿ ಆಸ್ಪತ್ರೆಯಲ್ಲಿ 239, ಆರ್ಯವೇದಿಕ್ ಕಾಲೇಜಿನಲ್ಲಿ 115 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, 383 ಜನರು ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ.
ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 1756ಕ್ಕೆ ಏರಿಕೆಯಾಗಿದೆ. ಇದರಲ್ಲಿ 579 ಝೋನ್ ಗಳು ವಿಸ್ತರಣೆಗೊಂಡಿವೆ.
ಕೋವಿಡ್ ಪರೀಕ್ಷೆ:
ಇಂದು ಜಿಲ್ಲೆಯಲ್ಲಿ 492 ಜನರನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 316 ಜನರ ವರದಿ ಬಂದಿದೆ. ಈವರೆಗೆ 41,023 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 33,249 ಮಂದಿಯ ವರದಿ ಬಂದಿದೆ.