ETV Bharat / state

ಹಣ ಗೋಲ್‌ಮಾಲ್​ ಮಾಡಿದ್ದು ನೀವು, ನಾನಲ್ಲ: ಯೋಗೇಶ್ವರ್​ಗೆ ಹೆಚ್​​ಡಿಕೆ ಟಾಂಗ್​ - ಹೆಚ್​​ಡಿಕೆ ಟಾಂಗ್​

ಈ ಹಿಂದೆ ಏತ ನೀರಾವರಿ ಯೋಜನೆಯಲ್ಲಿ ಹಣ ಗೋಲ್‌ಮಾಲ್ ಮಾಡಿರುವ ಸಿ.ಪಿ.ಯೋಗೇಶ್ವರ್​​, ಇದೀಗ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಈಗ ಸಚಿವ ಸ್ಥಾನ ದೊರೆತಿದೆ. ಇಲ್ಲಿ ಮಾಡಿದಂತೆ ರಾಜ್ಯದಲ್ಲೆಲ್ಲಾ ಮಾಡಬೇಡಿ ಎಂದು ಹೆಚ್​​.ಡಿ.ಕುಮಾರಸ್ವಾಮಿ ಹೇಳಿದರು.

HDK
ಹೆಚ್​​.ಡಿ.ಕುಮಾರಸ್ವಾಮಿ ಹೇಳಿಕೆ
author img

By

Published : Jan 22, 2021, 5:32 PM IST

ರಾಮನಗರ: ಸಚಿವ ಸ್ಥಾನ ಸಿಕ್ಕಿದ್ದಕ್ಕಾದರೂ ಉತ್ತಮ ಕೆಲಸಗಳನ್ನು ಮಾಡಿ. ಇಲ್ಲಿ ಮಾಡಿದಂತೆ ರಾಜ್ಯಾದ್ಯಂತ ಗೋಲ್​​ಮಾಲ್​ ಮಾಡಿ ಹಣ ಮಾಡಬೇಡಿ ಎಂದು ನೂತನ ಸಚಿವ ಸಿ.ಪಿ.ಯೋಗೇಶ್ವರ್​​ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್​ ನೀಡಿದ್ದಾರೆ.

ಹೆಚ್​​.ಡಿ.ಕುಮಾರಸ್ವಾಮಿ ಹೇಳಿಕೆ

ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್​​ ರಾಜ್ಯಕ್ಕೆ ಸಚಿವರಾಗಿದ್ದಾರೆ. ಆದರೆ ಚನ್ನಪಟ್ಟಣದಲ್ಲಿ ಶಾಸಕನಾಗಿ ಅವರಿಗಿಂತ ಹೆಚ್ಚಿನ ಅಧಿಕಾರ ನನಗಿದೆ. ಈ ಹಿಂದೆ ಏತ ನೀರಾವರಿ ಯೋಜನೆಯಲ್ಲಿ ಕಳಪೆ ಪೈಪ್​ಗಳನ್ನು ಬಳಸಿ ಹಣ ಲಪಟಾಯಿಸಿಕೊಂಡು, ಇದೀಗ ನನ್ನ ಮೇಲೆ ಅದರ ಹೊಣೆ ಹೊರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ನೀವು ಬೇರೆಯವರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಿ, ಇದೇ ರೀತಿಯಲ್ಲಿ ನಿಮ್ಮ ಮಾತುಗಳು ಮುಂದುವರಿದರೆ ನೀವೇ ಜನರ ಮುಂದೆ ಹಗುರವಾಗುತ್ತೀರಿ. ನಾನು ನನ್ನ ಅಭಿಮಾನಿಗಳಿಂದ ಇನ್ನಷ್ಟು ಬಿಗಿಯಾಗುತ್ತೇನೆ. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.