ರಾಮನಗರ: ನಮ್ಮ ಜಮೀನು ಉಳಿಸಿಕೊಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದ ಘಟನೆ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ ಕೆ ಸುರೇಶ್ ಎದುರೇ ಡಿಸಿ ಕಾಲಿಗೆ ಗ್ರಾಮಸ್ಥರು ಬಿದ್ದು ಮನವಿ ಮಾಡಿದರು. ರಾಮನಗರ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ಕಾಲಿಗೆ ಬಿದ್ದ ಮಹಿಳೆಯರು, ರೈತರು ಉಳುಮೆ ಮಾಡುತ್ತಿದ್ದ 40 ಎಕರೆ ಪ್ರದೇಶವನ್ನ ಶೈಕ್ಷಣಿಕ ಉದ್ದೇಶಕ್ಕಾಗಿ ಜಿಲ್ಲಾಡಳಿತ ವಶಪಡಿಸಿಕೊಂಡಿದೆ.
ಈ ಜಾಗದಲ್ಲಿ ಶಾಲಾ - ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಹಲವಾರು ವರ್ಷಗಳಿಂದ ಗೋಮಾಳ ಜಾಗದಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ನಾವು ಬಂದಿದ್ದೇವೆ. ಹೀಗಾಗಿ, ಜಮೀನು ವಶಪಡಿಸಿಕೊಳ್ಳದಂತೆ ಡಿಸಿ ಬಳಿ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.
ಓದಿ: ತುಕ್ಕು ಹಿಡಿದು ತುಂಡಾಗುವ ಸ್ಥಿತಿಯಲ್ಲಿ ಬಡಗಣಿ ತೂಗು ಸೇತುವೆ: ಸಂಚಾರಕ್ಕೂ ಭಯ