ETV Bharat / state

ರಾಮನಗರದಲ್ಲಿ ಮಹಿಳೆಗೆ ಥಳಿಸಿದ ಗ್ರಾ.ಪಂ ಸದಸ್ಯ - ರೈತನ ಮಗಳ ಮೇಲೆ ಹಲ್ಲೆ ವಿಡಿಯೋ

ಜಮೀನಿನ ವಿಚಾರವಾಗಿ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಮಹಿಳೆಗೆ ಕಪಾಳಮೋಕ್ಷ ಮಾಡಿ ಕೂದಲು ಹಿಡಿದು ಎಳೆದಾಡಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ಜರುಗಿದೆ. ಗ್ರಾ.ಪಂ ಸದಸ್ಯನ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

woman-beaten-by-grama-panchayat-member
ಮಹಿಳೆಗೆ ಥಳಿಸಿದ ಗ್ರಾಪಂ ಅಧ್ಯಕ್ಷ
author img

By

Published : Nov 25, 2021, 6:05 PM IST

Updated : Nov 25, 2021, 7:06 PM IST

ರಾಮನಗರ: ಮಳೆ ನೀರು ತನ್ನ ಜಮೀನಿಗೆ ಹರಿದಿದ್ದರಿಂದ ಕೆರಳಿದ ಗ್ರಾ.ಪಂ. ಸದಸ್ಯನೊರ್ವ ಪಕ್ಕದ ಜಮೀನಿನ ಮಹಿಳೆಗೆ ಕಪಾಳಮೋಕ್ಷ ಮಾಡಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೆಣಸಿಗನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸಿದ್ದರಾಜು ತನ್ನ ಪಕ್ಕದ ಜಮೀನಿನ ರೈತನ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳೀಯರೊಬ್ಬರು ಘಟನೆಯ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ತಾಣದಲ್ಲಿ ಹರಿಬಿಡಲಾಗಿದೆ. ಗ್ರಾ.ಪಂ ಸದಸ್ಯನ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಮಹಿಳೆಗೆ ಥಳಿಸಿದ ಗ್ರಾ.ಪಂ ಅಧ್ಯಕ್ಷ

ಘಟನೆ ವಿವರ:

ಸಿದ್ದರಾಜು ತನ್ನ ಜಮೀನಿಗೆ ಪಕ್ಕದ ಜಮೀನಿನಿಂದ ನೀರು ಬರುವ ಬಗ್ಗೆ ತಗಾದೆ ತೆಗೆದಿದ್ದಾರೆ. ಈ ವೇಳೆ ಪಕ್ಕದ ಜಮೀನಿನ ಮಾಲೀಕರ ಪತ್ನಿ ಮತ್ತು ಮಗಳ ಜೊತೆ ಮಾತಿನ ಚಕಮಕಿಗಿಳಿದಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವತಿಯ ಕಪಾಳಕ್ಕೆ ಹೊಡೆದು ತಲೆ ಕೂದಲು ಹಿಡಿದು ನೆಲಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದಾರೆ ಎನ್ನಲಾಗಿದೆ.

Last Updated : Nov 25, 2021, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.