ETV Bharat / state

ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಸರ್ಕಾರಕ್ಕೆ ಗಡುವು ನೀಡಿಲ್ಲ: ಕಲ್ಲಡ್ಕ ಪ್ರಭಾಕರ್ ಭಟ್ - ಕಲ್ಲಡ್ಕ ಪ್ರಭಾಕರ್ ಭಟ್

ಕಪಾಲಿಬೆಟ್ಟದ ವಿಷಯದಲ್ಲಿ‌ ನಾವು ಸರ್ಕಾರಕ್ಕೇನು 25 ನೇ ತಾರೀಖು ಅಂತ ಗಡುವು ಕೊಟ್ಟಿರಲಿಲ್ಲ. ಅಲ್ಲಿ ಮುನಿಸ್ವಾಮಿಗೆ ಗೌರವ ಸಿಕ್ಕೇ ಸಿಗುತ್ತೆ ಅದು ಮುನಿಸ್ವಾಮಿ ಬೆಟ್ಟವಾಗೇ ಉಳಿಯಲಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದ್ದಾರೆ.

Kalladka Prabhakar Bhat
ಕಲ್ಲಡ್ಕ ಪ್ರಭಾಕರ್ ಭಟ್
author img

By

Published : Feb 10, 2020, 3:24 AM IST

ರಾಮನಗರ: ಏಸು ಪ್ರತಿಮೆ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಗಡುವು ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಲ್ಲಡ್ಕ ಪ್ರಭಾಕರ್ ಭಟ್ ಉಲ್ಟಾ ಹೊಡೆದಿದ್ದಾರೆ . ನಾವು ಗಡುವು ಕೊಟ್ಟಿಲ್ಲ, ನಾವು ಗಡುವು ಕೊಟ್ಟಿದ್ದು ದಾಖಲೆ ಇದೆಯಾ? ಎಂದೇಳುವ ಮೂಲಕ ತಮ್ಮ ಹೇಳಿಕೆಗೇ ಉಲ್ಟಾ ಹೊಡೆದಿದ್ದಾರೆ.

ನಗರದಲ್ಲಿ ಆರ್​ಎಸ್​ಎಸ್​ ಪಥ ಸಂಚಲನ‌ ಬಳಿಕ ವೇದಿಕೆ ಕಾರ್ಯಕ್ರಮ ಮುಗಿಸಿ ಮಾತನಾಡಿದ ಅವರು ಕಪಾಲಿಬೆಟ್ಟದ ವಿಷಯದಲ್ಲಿ‌ ನಾವು ಸರ್ಕಾರಕ್ಕೇನು 25 ನೇ ತಾರೀಖು ಅಂತ ಗಡುವು ಕೊಟ್ಟಿರಲಿಲ್ಲ. ಅಲ್ಲಿ ಮುನಿಸ್ವಾಮಿಗೆ ಗೌರವ ಸಿಕ್ಕೇ ಸಿಗುತ್ತೆ, ಅದು ಮುನಿಸ್ವಾಮಿ ಬೆಟ್ಟವಾಗೇ ಉಳಿಯಲಿದೆ. ಇಲ್ಲಿನ ಹಿಂದೂ ಸಮಾಜ ಮರೆವಿನ ಸಮಾಜವಾಗಿದೆ. ಹಾಗಾಗಿ ಇಲ್ಲಿನ ಹಿಂದೂ ಸಮಾಜವನ್ನು ಎಚ್ಚರಿಸುತ್ತಿದ್ದೇವೆ ಎಂದರು.

ಸುಮ್ಮನೆ ಸರ್ಕಾರ ಹೇಳಿಕೆ ನೀಡೋಲ್ಲಾ. ಸಾರ್ವಜನಿಕರು ಮಾತನಾಡಿದ ಹಾಗೆ ಸರ್ಕಾರ‌ ಮಾತನಾಡಲು ಆಗೋದಿಲ್ಲ, ಮೊದಲು ಸರ್ಕಾರ ವರದಿ ತರಿಸಿಕೊಳ್ಳಲಿ ಬಿಡಿ ಎಂದ ಅವರು, ಆ ಬೆಟ್ಟ ಮುನಿಸ್ವಾಮಿ ಬೆಟ್ಟವಾಗೇ ಉಳಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಲಡ್ಕ ಪ್ರಭಾಕರ್ ಭಟ್

ಇದೇ ವೇಳೆ ಶಾಂತಿ ಕದಡುವ ಪ್ರಯತ್ನ ಮಾಡಿದ್ದು ನಾವಾ? ಅವರಾ? ಶಾಂತಿ ಕದಡಿರೋರು ಯಾರು? ಕಳೆದ ದಶಕಗಳಿಂದ ಕಾನೂನು ಮೀರಿ ಕೆಲಸ ಮಾಡಿದವರು ಯಾರು? ಇಲ್ಲಿ ಅನ್ಯಾಯ ಮಾಡಿದ್ದು ಯಾರು? ನಾವು ಮಾಡಿದ್ವಾ? ಜೈಲಿಗೆ ಯಾಕೆ ಹೋಗಿದ್ರು ಕೇಳಿ, ಅನ್ಯಾಯ ಮಾಡಿದ್ದಕ್ಕೆ ತಾನೇ ಅವರು ಜೈಲಿಗೆ ಹೋಗಿದ್ದು. ನಾವು ರಾಜಕೀಯ ಮುಂದಿಟ್ಟುಕೊಂಡು ಕೆಲಸ ಮಾಡ್ತಿಲ್ಲ, ಹಿಂದೂ ಸಮಾಜದ ರಕ್ಷಣೆ ನಮಗೆ ಪ್ರಮುಖವಾದದ್ದು ನಾವು ಎಂಪಿ ಸೀಟ್​ ಗಾಗಿ ಇಲ್ಲಿ ಕೆಲಸ ಮಾಡ್ತಿಲ್ಲ, ಹಿಂದು ಸಮಾಜದ ರಕ್ಷಣೆಗೆ ಸಂಘ ಕೆಲಸ ಮಾಡ್ತಿದೆ ಅಷ್ಟೇ ಎಂದು ತಿಳಿಸಿದರು.

ಆರ್​ಎಸ್​ಎಸ್​ ನವರಿಗೆ ಬೇಕಾದರೆ ನಾನೇ ಊಟ ಹಾಕಿಸ್ತೇನೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಷ್ಟು ದಿನ ಮುಸ್ಲಿಂರಿಗೆ ,ಕ್ರಿಶ್ಚಿಯನ್​ರಿಗೆ ಅನ್ನ ಕೊಡ್ತಿದ್ರು? ನಮಗೆ ಅನ್ನ ಕೊಡೋದು ಬೇಡ ಹಿಂದೂ ಸಮಾಜಕ್ಕೆ, ಸಂಘಕ್ಕೆ ಅಂತ ಕೆಟ್ಟ ದಿನ ಬಂದಿಲ್ಲ. ಇಂಥ ದುರುಳರ ಬಳಿ ಭಿಕ್ಷೆ ಬೇಡಲ್ಲ ಒಳ್ಳೆ ಒಳ್ಳೆ ಜನ ಇದ್ದಾರೆ. ಮೋಸ ವಂಚನೆಯಿಂದ ಅಧಿಕಾರ ನಡೆಸಿದವರ ಬಳಿ ನಾನು ಅನ್ನ ಕೇಳಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.

ಗಣವೇಷದಾರಿಯಾಗಿ ಪಥಸಂಚಲನದಲ್ಲಿ ಇದೇ ಮೊದಲ‌ಬಾರಿಗೆ ಸಿ.ಪಿ.ಯೋಗೇಶ್ವರ್ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ‌ ನಡೆಸಿದರು. ಈ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Intro:Body:
ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಸರ್ಕಾರಕ್ಕೆ ಗಡುವು ನೀಡಿದ ವಿಚಾರದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಉಲ್ಟಾ ಹೊಡೆದರು. ನಾವು ಗಡುವು ಕೊಟ್ಟಿಲ್ಲ, ನಾವು ಗಡುವು ಕೊಟ್ಟಿದ್ದು ದಾಖಲೆ ಇದೆಯಾ? ಎಂದೇಳುವ ಮೂಲಕ ತಮ್ಮ ಹೇಳಿಕೆಗೇ ಉಲ್ಟಾ ಹೊಡೆದಿದ್ದಾರೆ.
ನಗರದಲ್ಲಿ ಆರ್ ಎಸ್‌ ಎಸ್ ಪಥ ಸಂಚಲನ‌ ಬಳಿಕ ವೇದಿಕೆ ಕಾರ್ಯಕ್ರಮ ಮುಗಿಸಿ ಮಾತನಾಡಿದ ಅವರು ಕಪಾಲ‌ಬೆಟ್ಟದ ವಿಷಯದಲ್ಲಿ‌ ನಾವು ಸರ್ಕಾರಕ್ಕೇನು ೨೫ ನೇ ತಾರೀಖು ಅಂತ ಗಡುವು ಕೊಟ್ಟಿರಲಿಲ್ಲ, ಅಲ್ಲಿ ಮುನಿಸ್ವಾಮಿಗೆ ಗೌರವ ಸಿಕ್ಕೇ ಸಿಗುತ್ತೆ
ಅದು ಮುನಿಸ್ವಾಮಿ ಬೆಟ್ಟವಾಗೇ ಉಳಿಯಲಿದೆ ,ಇಲ್ಲಿನ ಹಿಂದು ಸಮಾಜ ಮರೆವಿನ ಸಮಾಜವಾಗಿದೆ ಹಾಗಾಗಿ ಇಲ್ಲಿನ ಹಿಂದೂ ಸಮಾಜವನ್ನು ಎಚ್ಚರಿಸುತ್ತಿದ್ದೇವೆ ಎಂದರು. ಸುಮ್ಮನೆ ಸುಮ್ಮನೆ ಸರ್ಕಾರ ಹೇಳಿಕೆ ನೀಡೋಲ್ಲಾ ಸಾರ್ವಜನಿಕರು ಮಾತನಾಡಿದ ಹಾಗೆ ಸರ್ಕಾರ‌ ಮಾತನಾಡಲು ಆಗೋದಿಲ್ಲ, ಮೊದಲು ಸರ್ಕಾರ ವರದಿ ತರಿಸಿಕೊಳ್ಳಲಿ ಬಿಡಿ ಎಂದ ಅವರು ಆ ಬೆಟ್ಟ ಮುನಿಸ್ವಾಮಿ ಬೆಟ್ಟವಾಗೇ ಉಳಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಶಾಂತಿ ಕದಡುವ ಪ್ರಯತ್ನ ಮಾಡಿದ್ದು ನಾವಾ? ಅವರಾ? ಶಾಂತಿ ಕದಡಿರೋರು ಯಾರು? ಕಳೆದ ದಶಕಗಳಿಂದ ಕಾನೂನು ಮೀರಿ ಕೆಲಸ ಮಾಡಿದವರು ಯಾರು? ಇಲ್ಲಿ ಅನ್ಯಾಯ ಮಾಡಿದ್ದು ಯಾರು? ನಾವು ಮಾಡಿದ್ವಾ? ಜೈಲಿಗೆ ಯಾಕೆ ಹೋಗಿದ್ರು ಕೇಳಿ ಅನ್ಯಾಯ ಮಾಡಿದ್ದಕ್ಕೆ ತಾನೇ ಅವರು ಜೈಲಿಗೆ ಹೋಗಿದ್ದು ನಾವು ರಾಜಕೀಯ ಮುಂದಿಟ್ಟುಕೊಂಡು ಕೆಲಸ ಮಾಡ್ತಿಲ್ಲ ಹಿಂದೂ ಸಮಾಜದ ರಕ್ಷಣೆ ನಮಗೆ ಪ್ರಮುಖವಾದದ್ದು ನಾವು ಎಂಪಿ ಸೀಟಿಗಾಗಿ ಇಲ್ಲಿ ಕೆಲಸ ಮಾಡ್ತಿಲ್ಲ, ಹಿಂದು ಸಮಾಜದ ರಕ್ಷಣೆಗೆ ಸಂಘ ಕೆಲಸ ಮಾಡ್ತಿದೆ ಅಷ್ಟೇ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದರು.
ಆರ್ ಎಸ್ ಎಸ್ ನವರಿಗೆ ಬೇಕಾದರೆ ನಾನೇ ಊಟ ಹಾಕಿಸ್ತೇನೆ ಎಂಬ ಡಿಕೆ ಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಇಷ್ಟು ದಿನ ಮುಸ್ಲಿಂ ರಿಗೆ ,ಕ್ರಿಶ್ಚಿಯನ್ ರಿಗೆ ಅನ್ನ ಕೊಡ್ತಿದ್ರು? ನಮಗೆ ಅನ್ನ ಕೊಡೋದು ಬೇಡ ಹಿಂದೂ ಸಮಾಜಕ್ಕೆ, ಸಂಘಕ್ಕೆ ಅಂತ ಕೆಟ್ಟ ದಿನ ಬಂದಿಲ್ಲ ಇಂಥ ದುರುಳರ ಬಳಿ ಭಿಕ್ಷೆ ಬೇಡಲ್ಲ ಒಳ್ಳೆ ಒಳ್ಳೆ ಜನ ಇದ್ದಾರೆ. ಮೋಸ ವಂಚನೆಯಿಂದ ಅಧಿಕಾರ ನಡೆಸಿದವರ ಬಳಿ ನಾನು ಅನ್ನ ಕೇಳಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.
ಗಣವೇಷದಾರಿಯಾಗಿ ಪಥಸಂಚಲನದಲ್ಲಿ ಇದೇ ಮೊದಲ‌ಬಾರಿಗೆ ಸಿ.ಪಿ.ಯೋಗೇಶ್ವರ್ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಘಿಗಳು ಪಥ ಸಂಚಲನ‌ನಡೆಸಿದರು. ಈ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಪೋಲೀಸ್ ಬಂದೂಬಸ್ತ್ ಏರ್ಪಡಿಸಲಾಗಿತ್ತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.