ರಾಮನಗರ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಕಾಮಗಾರಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಶೀಲನೆ ನಡೆಸಿದರು. ರಾಮನಗರ ಜಿಲ್ಲೆಯ ಜಿಗೇನಹಳ್ಳಿ ಬಳಿ ಎರಡು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಈ ಹೆಲಿಪ್ಯಾಡ್ನಿಂದ ಬಸವನಪುರವರೆಗೂ ಗಡ್ಕರಿ ಅವರೇ ಕಾರ್ ಡ್ರೈವ್ ಮಾಡಿಕೊಂಡು ರಸ್ತೆಯ ಸ್ಥಿತಿಗತಿ ಪರೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ. ಸಮೀಕ್ಷೆಯ ಬಳಿಕ ಸಚಿವರು ಮಾಧ್ಯಮಗಳೊಂದಿಗೆ ಸಂವಾದ ನಡೆಸುವರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ವೀಕ್ಷಣೆಗೆ ನಿತಿನ್ ಗಡ್ಕರಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ರಸ್ತೆ ಸಂಪರ್ಕ ಬಂದ್ ಮಾಡಲಾಗಿತ್ತು. ಕಳೆದ ಬಾರಿ ಮಳೆ ಬಂದು ಹೆದ್ದಾರಿ ಸಂಪೂರ್ಣ ಜಲಾವೃತವಾಗಿತ್ತು. ಅವೈಜ್ಞಾನಿಕ ಕಾಮಗಾರಿ ಎಂದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದೀಗ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ.
-
#WATCH | Union Minister for Road Transport & Highways Nitin Gadkari inspected the progress of the Bengaluru – Chennai Expressway which is a 262 Km 8-lane layout worth Rs 16,730 Crores.
— ANI (@ANI) January 5, 2023 " class="align-text-top noRightClick twitterSection" data="
(Source: Nitin Gadkari's office) pic.twitter.com/3LfDrKP61n
">#WATCH | Union Minister for Road Transport & Highways Nitin Gadkari inspected the progress of the Bengaluru – Chennai Expressway which is a 262 Km 8-lane layout worth Rs 16,730 Crores.
— ANI (@ANI) January 5, 2023
(Source: Nitin Gadkari's office) pic.twitter.com/3LfDrKP61n#WATCH | Union Minister for Road Transport & Highways Nitin Gadkari inspected the progress of the Bengaluru – Chennai Expressway which is a 262 Km 8-lane layout worth Rs 16,730 Crores.
— ANI (@ANI) January 5, 2023
(Source: Nitin Gadkari's office) pic.twitter.com/3LfDrKP61n
ಮಾರ್ಚ್ ಅಂತ್ಯದೊಳಗೆ ಹೆದ್ದಾರಿ ಉದ್ಘಾಟನೆ: ಮಾರ್ಚ್ ಅಂತ್ಯದ ವೇಳೆಗೆ ಹೆದ್ದಾರಿ ಉದ್ಘಾಟನೆ ಸಾಧ್ಯತೆ ಇದೆ. ಈ ಮುಖೇನ ಬೆಂಗಳೂರಿನಿಂದ ಮೈಸೂರಿಗೆ ಕೇವಲ ಒಂದೂವರೆ ಗಂಟೆ ಪ್ರಯಾಣ ಮಾಡಬಹುದು. ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಗಡ್ಕರಿ ನಡೆಸಲಿರುವ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.
ಗಡ್ಕರಿ ಟೆಸ್ಟ್ ಡ್ರೈವ್: ವೈಮಾನಿಕ ಸಮೀಕ್ಷೆಯ ಬಳಿಕ ನಿತಿನ್ ಗಡ್ಕರಿ ಅವರೇ ಕಾರ್ ಡ್ರೈವ್ ಮಾಡಿ ರಸ್ತೆ ಕಾಮಗಾರಿ ಪರಿಶೀಲಿಸಲಿದ್ದಾರೆ ಎಂದು ಹೇಳಲಾಗಿದೆ. ಸಚಿವರ ಕಾರ್ಯಕ್ರಮ ಮುಗಿಯುವವರೆಗೂ ಎಕ್ಸ್‌ಪ್ರೆಸ್ ವೇನ ಬೈಪಾಸ್ ಬಂದ್ ಆಗಲಿದೆ. ಹೀಗಾಗಿ ಪ್ರಯಾಣಿಕರು ಬೈಪಾಸ್ ಬದಲು ಹಳೆಯ ರಸ್ತೆಗಳಲ್ಲಿ ಸಂಚರಿಸಬೇಕು. ಈ ಹಿಂದೆ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಗಂಟೆಗೆ 180 ಕಿ.ಮೀ ವೇಗದಲ್ಲಿ ಕಾರ್ ಚಲಾಯಿಸಿ ಗಡ್ಕರಿ ದಾಖಲೆ ಬರೆದಿದ್ದರು.
ಪ್ರಾಣಿಗಳು ರಸ್ತೆಗೆ ಬಾರದಂತೆ ತಂತಿ ಬೇಲಿ: ಎಕ್ಸ್‌ಪ್ರೆಸ್ ವೇನಲ್ಲಿ ಆಟೋ, ಟ್ರ್ಯಾಕ್ಟರ್, ಎತ್ತಿನಗಾಡಿ, 200 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳಿಗೆ ಪ್ರವೇಶ ನಿರ್ಬಂಧಿಸಲು ಹೆದ್ದಾರಿ ಪ್ರಾಧಿಕಾರ ಚಿಂತಿಸಿದೆ. ಇಂತಹ ವಾಹನಗಳು ಸರ್ವಿಸ್ ರಸ್ತೆಯಲ್ಲೇ ಚಲಿಸಬೇಕು. ಎಕ್ಸ್‌ಪ್ರೆಸ್‌ವೇ ಎಡ-ಬಲದಲ್ಲಿ ಆರಡಿ ಉದ್ದದ ತಂತಿಬೇಲಿ ಹಾಕಲಾಗಿದೆ. ಇದರಿಂದ ಜಾನುವಾರುಗಳು ರಸ್ತೆಗೆ ನುಗ್ಗುವುದು ತಪ್ಪಲಿದ್ದು, ಅಪಘಾತಗಳೂ ಕಡಿಮೆ ಆಗಲಿವೆ.
ಇದನ್ನೂ ಓದಿ: ದೇಹದ ತೂಕ ಇಳಿಸಿಕೊಂಡೇ ಕ್ಷೇತ್ರಕ್ಕೆ 2,300 ಕೋಟಿ ಅನುದಾನ ತಂದ ಸಂಸದ!