ರಾಮನಗರ : ಕೋವಿಡ್-19 ವಿರುದ್ಧದ ಹೋರಾಟದಲ್ಲಿ ತನ್ನ ಪರಿಹಾರ ಕ್ರಮಗಳನ್ನು ಮುಂದುವರಿಸಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಕೆಲವು ಉದ್ಯೋಗಿಗಳಿಗೆ, ರಾಷ್ಟ್ರೀಯ ವೈದ್ಯರ ಸಹಾಯವಾಣಿಗೆ ಕೊಡುಗೆ ನೀಡಲು ಮತ್ತು ಬೆಂಬಲಿಸಲು ಪ್ರಾರಂಭಿಸುವುದಾಗಿ ಇಂದು ಘೋಷಿಸಿದೆ.
ಕೋವಿಡ್-19 ರೋಗಿಗೆ ಟೆಲಿಸಮಾಲೋಚನೆ ಒದಗಿಸುವ ಸಹಾಯವಾಣಿಯನ್ನು ಬೆಂಬಲಿಸುವ ಅಗತ್ಯಕ್ಕೆ ಅನುಗುಣವಾಗಿ ಸುಮಾರು 60 ಟಿಕೆಎಂ ಉದ್ಯೋಗಿಗಳನ್ನು ಆರಂಭದಲ್ಲಿ ಒಂದು ತಿಂಗಳ ಅವಧಿಗೆ ಮನೆಯಿಂದಲೇ ಕೆಲಸ ಮಾಡಲು ಮುಂದಾಗಿದ್ದಾರೆ.
ಸ್ವಯಂಪ್ರೇರಿತ ಟಿಕೆಎಂ ಉದ್ಯೋಗಿಗಳು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಮತ್ತು ನೋಂದಾಯಿತ ವೈದ್ಯರೊಂದಿಗೆ ಸಂಪರ್ಕ ಸಾಧಿಸಲು ಕೋವಿಡ್-19 ರೋಗಿಗಳಿಗೆ ಸಹಾಯ ಮಾಡುತ್ತಾರೆ.
ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಎಲ್ಲಾ ರೋಗಿಗಳು ಸರಿಯಾದ ವೇಳಾಪಟ್ಟಿ ಮತ್ತು ಅನುಸರಣೆಗಳ ಮೂಲಕ ವೈದ್ಯರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ ವೈದ್ಯರ ಶಿಫ್ಟ್‌ಗಳನ್ನು ಸಿದ್ಧಪಡಿಸುವ ಪಾತ್ರವನ್ನು ಒಳಗೊಂಡಿರುತ್ತದೆ.
ಸ್ವಯಂಸೇವಕರ 1ನೇ ಬ್ಯಾಚ್ ನೇಮಕಗೊಂಡ ಏಜೆನ್ಸಿಗಳಿಂದ ಅಗತ್ಯ ಆನ್ಲೈನ್ ತರಬೇತಿ ಪಡೆಯುತ್ತಿದೆ. ಅದರ ನಂತರ ಅವರನ್ನು ಶೀಘ್ರದಲ್ಲೇ ನಿಯೋಜಿಸಲಾಗುವುದು.
ಕೋವಿಡ್-19 ಸೋಂಕುಗಳಿಂದ ಹೆಚ್ಚುತ್ತಿರುವ ವೈದ್ಯಕೀಯ ಆರೈಕೆಯ ಬೇಡಿಕೆಯನ್ನು ನಿಭಾಯಿಸಲು ಸ್ಥಳೀಯ ಸಮುದಾಯಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಬೆಂಬಲ ನೀಡಲು ರಚಿಸಲಾದ ಟಿಕೆಎಂನ 'ಕೋವಿಡ್ ವಾರಿಯರ್ಸ್ ಕ್ಲಬ್'ನ ಭಾಗವಾಗಿ ಸ್ವಯಂಸೇವಕರು ಕಾರ್ಯ ನಿರ್ವಹಿಸಲಿದ್ದಾರೆ.
ಓದಿ: ನಾಳೆ ಸಿಎಂ ಸುದ್ದಿಗೋಷ್ಠಿ: ವಿಶೇಷ ಪ್ಯಾಕೇಜ್, ಲಾಕ್‌ಡೌನ್ ವಿಸ್ತರಣೆ ಘೋಷಣೆ ಸಾಧ್ಯತೆ