ರಾಮನಗರ: ರಸ್ತೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸುವವರು ಇನ್ಮುಂದೆ ತುಂಬಾ ಕೇರ್ಫುಲ್ ಆಗಿ ಇರಿ. ಯಾಕೆಂದರೆ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡುವವರ ವಿರುದ್ಧ ಇನ್ಮುಂದೆ ಪ್ರಕರಣ ದಾಖಲಾಗಲಿದೆ. ಇದೇ ರೀತಿ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿದವರ ವಿರುದ್ಧ ರಾಮನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಸರ್ಕಲ್ನಲ್ಲಿ ಐವರು ಯುವಕರು ಹುಟ್ಟುಹಬ್ಬವನ್ನು ಆಚರಿಸಿದ್ದರು. ಸಂಭ್ರಮಾಚರಣೆ ನೆಪದಲ್ಲಿ ಕೇಕ್ ಕತ್ತರಿಸಿ ಕಿರುಚಾಡುತ್ತಿದ್ದ ಯುವಕರ ಗುಂಪಿನ ವಿರುದ್ಧ ಪ್ರಕರಣ ದಾಖಲಾಗಿದೆ. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಲಕ್ಕೇನಹಳ್ಳಿ ಗ್ರಾಮದ ಸಂದೀಪ್ ಸೇರಿ ನಾಲ್ವರು ಸ್ನೇಹಿತರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಕೋಳಿಗೆ ಗೌನ್, ಸರ ತೊಡಿಸಿ ಹುಟ್ದಬ್ಬ ಆಚರಿಸಿದ ಯುವಕ- ಕೇಕ್ನಲ್ಲಿ ಮುಳುಗೆದ್ದ 'ಮೋಟು' - ವಿಡಿಯೋ
ಈ ಕುರಿತು ಮೊದಲೇ ರಾಮನಗರ ಎಸ್ಪಿ ಸಂತೋಷ್ ಬಾಬು ಎಚ್ಚರಿಕೆ ನೀಡಿದ್ದರು. ಹೆದ್ದಾರಿ, ಸರ್ಕಲ್ಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.