ರಾಮನಗರ: ಸದ್ಯಕ್ಕೆ ರಾಜ್ಯದಲ್ಲಿ ಲಾಕ್ಡೌನ್ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದ ಸದಸ್ಯರು ಲಾಕ್ಡೌನ್ ಬೇಡ ಎಂದಿದ್ದಾರೆ. ಹಾಗಾಗಿ, ಲಾಕ್ಡೌನ್ ಜಾರಿ ಮಾಡುವುದಿಲ್ಲ ಎಂದರು.
ಪ್ರತಿಪಕ್ಷಗಳ ನಾಯಕರು ಲಾಕ್ಡೌನ್ ಮಾಡುವುದು ಬೇಡ ಎಂದಿದ್ದಾರೆ. ಆದರೆ, ಕೊರೊನಾ ಲಕ್ಷಣಗಳಿದ್ದರೆ ಜನರು ಟೆಸ್ಟ್ ಮಾಡಿಸಿಕೊಳ್ಳಬೇಕು. ಜನರ ಕಲ್ಯಾಣಕ್ಕಾಗಿ ಸರ್ಕಾರ ಸೂಕ್ತ ಕ್ರಮ ವಹಿಸಲಿದೆ ಎಂದು ತಿಳಿಸಿದರು.
ಓದಿ: ಕೋವಿಡ್ ಉಲ್ಬಣದ ನಡುವೆಯೂ ಕರ್ತವ್ಯಕ್ಕಾಗಿ ರಸ್ತೆಗಿಳಿದ ಗರ್ಭಿಣಿ ಡಿವೈಎಸ್ಪಿ