ETV Bharat / state

ರಾಮನಗರ, ಶಿವಮೊಗ್ಗದಲ್ಲಿ ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ - ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಕರು ಕಪ್ಪು ಬಟ್ಟೆ ಧರಿಸಿ ತರಗತಿ ನಡೆಸುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು ಒಂದು ವಾರಗಳ ಕಾಲ ಪ್ರತಿಭಟಿಸಲು ನಿರ್ಧರಿಸಿದ್ದಾರೆ.

Teacher protests wearing black cloth in Ramanagara, Shimoga
ರಾಮನಗರ,ಶಿವಮೊಗ್ಗದಲ್ಲಿ ಕಪ್ಪು ಪಟ್ಟಿ ಧರಿಸಿ ಶಿಕ್ಷಕರ ಪ್ರತಿಭಟನೆ
author img

By

Published : Oct 21, 2021, 11:02 PM IST

ರಾಮನಗರ/ಶಿವಮೊಗ್ಗ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ನಿರ್ದೇಶನದ ಮೇರೆಗೆ ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲೆಯಾದ್ಯಂತ ಶಿಕ್ಷಕರು ಒಂದು ವಾರಗಳ ಕಾಲ ಕರ್ತವ್ಯದ ವೇಳೆ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲಿದ್ದಾರೆ.

ರಾಮನಗರಲ್ಲಿ ಕಪ್ಪು ಪಟ್ಟಿ ಧರಿಸಿ ತರಗತಿ ನಡೆಸಿದ ಶಿಕ್ಷಕರು

ಶಿಕ್ಷಕರ ಬೇಡಿಕೆಗಳು:

ಶಿಕ್ಷಕರು, ಪದವೀಧರ ಸಂಘದ ಶಿಕ್ಷಕರ ಸಮಸ್ಯೆ ಈಡೇರಿಸುವುದು, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಭಾರಿ ವರ್ಗಾವಣೆ, ಮುಖ್ಯ ಗುರುಗಳಿಗೆ 15, 20, 25 ವರ್ಷಗಳ ವೇತನ ಬಡ್ತಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು ಸೇರಿದಂತೆ ಗ್ರಾಮೀಣಾ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಕರು ಹಾಗೂ ಹಿಂದಿ ಶಿಕ್ಷಕರ ಸಮಸ್ಯೆಗಳು ಸೇರಿ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಈ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಶಿಕ್ಷಕರು ಹೋರಾಟ ಆರಂಭಿಸಿದ್ದಾರೆ.

ನಮ್ಮ ಸಮಸ್ಯೆಗಳನ್ನ ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದರೂ ಸರ್ಕಾರ ತಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಕೋವಿಡ್ ಸೋಂಕಿನಿಂದ ಬೋಧನೆ ಕುಂಠಿತವಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ.

ಕಪ್ಪು ಪಟ್ಟಿ ಧರಿಸಿ ತರಗತಿಗೆ ಹಾಜರಾಗ ಶಿಕ್ಷಕರು:

ಶಿವಮೊಗ್ಗದಲ್ಲೂ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಕೈಗೆ ಕಪ್ಪು ಪಟ್ಟಿ ಧರಿಸಿ ತರಗತಿ ನಡೆಸಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಕಪ್ಪು ಪಟ್ಟಿ ಧರಿಸಿ ತರಗತಿಗೆ ಹಾಜರಾದ ಶಿಕ್ಷಕರು

ಇಂದಿನಿಂದ ಅ.29 ರವರೆಗೆ ಕಪ್ಪುಪಟ್ಟಿ ಧರಿಸಿ ಶಾಲಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಸರ್ಕಾರ ಬೇಡಿಕೆಗೆ ಸ್ಪಂದಿಸದೇ ಹೋದರೆ ಅ.30 ರಿಂದ‌ ನ. 10 ರವರೆಗೆ ಮಧ್ಯಾಹ್ನದ ಊಟದ ಮಾಹಿತಿಯನ್ನು ನೀಡುವುದಿಲ್ಲ. ನ.11 ರಿಂದ 18 ರವರೆಗೆ ವಿದ್ಯಾರ್ಥಿಗಳ ಸಾಧನಾ ಟ್ರಾಕಿಂಗ್ ಮಾಹಿತಿಯನ್ನು ಅಪ್​​​ಲೋಡ್ ಮಾಡದಿರಲು ನಿರ್ಧರಿಸಿದ್ದಾರೆ.

ಸರ್ಕಾರ ಇದಕ್ಕೂ ಮಣಿಯದೆ ಹೋದ್ರೆ, ಮುಂದೆ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಶಿಕ್ಷಕರ ಸಂಘ ನಿರ್ಧರಿಸಿದೆ. ನಂತರ ತರಗತಿ ಬಹಿಷ್ಕಾರ ನಡೆಸುವ ತೀರ್ಮಾನ ಮಾಡಿದೆ.

ಶಿಕ್ಷಕರ ಸಮಸ್ಯೆ: ವರ್ಗಾವಣೆ, ವೇತನ ತಾರತಮ್ಯದ ಜೊತೆಗೆ ಹಿಂದೆ ಶಿಕ್ಷಕರು ನೇಮಕಾತಿಯಾಗುವಾಗ 1 ರಿಂದ 7 ನೇ ತರಗತಿಯವರೆಗೂ ಪಾಠ ಮಾಡುವ ಅವಕಾಶವಿತ್ತು. ಈಗ 1- 5 ನೇ ತರಗತಿ, 6 ರಿಂದ 8 ಹಾಗೂ 8 ರಿಂದ 12 ನೇ ತರಗತಿ ಹೀಗೆ ವೃಂದಗಳನ್ನು ಮಾಡಲಾಗಿದೆ. ಇಲ್ಲಿ ಒಂದು ವೃಂದದಿಂದ ಇನ್ನೂಂದು ವೃಂದಕ್ಕೆ ವರ್ಗಾವಣೆ ಇಲ್ಲ. ಅಲ್ಲದೇ ವೃಂದದ ಶಿಕ್ಷಕರು ಅಲ್ಲಿಗೆ ಸೀಮಿತ ಮಾಡುವುದಲ್ಲದೆ, ಸಂಬಳ ಸಹ ಕಡಿಮೆ ಪಡೆಯಬೇಕಾಗಿರುವುದರಿಂದ ಶಿಕ್ಷಕರು ಸರ್ಕಾರಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ಇಂದಿನಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಸೆಲ್ಫಿ ತೆಗೆಯಲು ಹೋಗಿ ಜಲಪಾತದ ಪ್ರಪಾತಕ್ಕೆ ಬಿದ್ದ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.