ETV Bharat / state

ಚನ್ನಪಟ್ಟಣ ನಗರಸಭೆಯ ಮೂರು ವಾರ್ಡ್​ಗಳಿಗೆ ಟ್ಯಾಂಕರ್​ ನೀರು.. - ಚನ್ನಪಟ್ಟಣ ನಗರಸಭೆ ನೀರು ಸರಬರಾಜು

ನಗರ ನೀರು ಸರಬರಾಜು, ಒಳಚರಂಡಿ ಮಂಡಳಿಯಿಂದ ಟ್ರ್ಯಾಕ್ಟರ್​ಗಳ ಮೂಲಕ ಮನೆ ಮನೆಗೂ ನೀರು ಪೂರೈಸಲಾಯಿತು. ಇಲ್ಲಿನ ಓವರ್ ಹೆಡ್ ಟ್ಯಾಂಕ್​ನಲ್ಲಿ ನಿನ್ನೆ ಮಹಿಳೆಯ ಶವ ಪತ್ತೆಯಾಗಿತ್ತು. ಇದರಿಂದಾಗಿ ಟ್ಯಾಂಕರ್​ ಶುಚಿಗೊಳಿಸುವ ಕಾರಣಕ್ಕಾಗಿ 9, 10, 11ನೇ ವಾರ್ಡ್​ಗೆ ನೀರು ಪೂರೈಕೆಗೆ ವ್ಯತ್ಯಯವಾಗಿತ್ತು..

tanker-water-for-three-wards-of-channapatna-municipality
ಚನ್ನಪಟ್ಟಣ ನಗರಸಭೆಯ ಮೂರು ವಾರ್ಡ್​ಗಳಿಗೆ ಟ್ಯಾಂಕರ್​ ನೀರು
author img

By

Published : Oct 10, 2021, 11:02 PM IST

ರಾಮನಗರ : ಚನ್ನಪಟ್ಟಣ ನಗರಸಭೆಯ ಮೂರು ವಾರ್ಡ್​ಗಳಿಗೆ ಇವತ್ತು ಟ್ಯಾಂಕರ್​ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಯಿತು.

ಚನ್ನಪಟ್ಟಣ ನಗರಸಭೆಯ ಮೂರು ವಾರ್ಡ್​ಗಳಿಗೆ ಟ್ಯಾಂಕರ್​ ನೀರು ಪೂರೈಕೆ..

ನಗರ ನೀರು ಸರಬರಾಜು, ಒಳಚರಂಡಿ ಮಂಡಳಿಯಿಂದ ಟ್ರ್ಯಾಕ್ಟರ್​ಗಳ ಮೂಲಕ ಮನೆ ಮನೆಗೂ ನೀರು ಪೂರೈಸಲಾಯಿತು. ಇಲ್ಲಿನ ಓವರ್ ಹೆಡ್ ಟ್ಯಾಂಕ್​ನಲ್ಲಿ ನಿನ್ನೆ ಮಹಿಳೆಯ ಶವ ಪತ್ತೆಯಾಗಿತ್ತು. ಇದರಿಂದಾಗಿ ಟ್ಯಾಂಕರ್​ ಶುಚಿಗೊಳಿಸುವ ಕಾರಣಕ್ಕಾಗಿ 9, 10, 11ನೇ ವಾರ್ಡ್​ಗೆ ನೀರು ಪೂರೈಕೆಗೆ ವ್ಯತ್ಯಯವಾಗಿತ್ತು.

ನಿನ್ನೆ ವಿಷಯ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದರು. ಎಲ್ಲವೂ ಸರಿ ಹೋಗುವ ತನಕ ಯಾರೂ ಓವರ್​​ಹೆಡ್ ಟ್ಯಾಂಕ್ ನೀರನ್ನು ಬಳಸಬಾರದು. ನಿತ್ಯವೂ ಎಲ್ಲ ಮನೆಗಳಿಗೆ ಟ್ಯಾಂಕರ್ ನೀರನ್ನೇ ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ 3 ವಾರ್ಡ್​ನ ಜನರಿಗೆ ಟ್ಯಾಂಕರ್​ಗಳಲ್ಲಿ ನೀರು ಪೂರೈಕೆ ಆಗುತ್ತಿದೆ. ಜತೆಗೆ ಅಷ್ಟೂ ವಾರ್ಡ್​ಗಳಲ್ಲಿ ಈಗಾಗಲೇ ಪ್ರತ್ಯೇಕ ಬೋರ್​ವೆಲ್​ಗಳು ಸಹ ಕೊರೆಸಲಾಗಿದೆ. ಅಲ್ಲದೆ, ಮಹಿಳೆ ಶವ ಪತ್ತೆ ಬಗ್ಗೆ ಆದಷ್ಟು ಬೇಗ ತನಿಖೆ ಮಾಡಿ ಪ್ರಕರಣ ಭೇದಿಸುವಂತೆ ಕುಮಾರಸ್ವಾಮಿ ಅವರು ಪೊಲೀಸರಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಅದರಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಓದಿ: ₹7.31 ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್‌ ಮರೆತುಹೋಗಿದ್ದ ರೈಲ್ವೆ ಪ್ರಯಾಣಿಕ.. ಆಮೇಲೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.