ETV Bharat / state

ಸಾಮರಸ್ಯವೇ ಧರ್ಮ..! ಹಿಂದೂ ದೇವಾಲಯಗಳ ನಿರ್ಮಿಸಿ ಭಾವೈಕ್ಯತೆ ಸಾರಿದ ಸೈಯದ್ - VIDEO - ಸಾಮರಸ್ಯವೇ ಧರ್ಮ.

ಬದುಕಲು ಹಣ ಮುಖ್ಯವಲ್ಲ ಸಾಮರಸ್ಯವೇ ಮುಖ್ಯ ಎಂದು ನಂಬಿರುವ ಸಾದತ್, ರಾಮನಗರದ ಚನ್ನಪಟ್ಟಣ ಕ್ಷೇತ್ರದವರು. ಇವರು ಚನ್ನಪಟ್ಟಣ ತಾಲೂಕಿನ ಸಂತೆ ಮೋಗೇನಹಳ್ಳಿ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇವಾಲಯ ಕಟ್ಟಿಸಿ ಮಾದರಿಯಾಗಿದ್ದಾರೆ.

syed-sadat-who-build-hindu-temples-for-reinstatement-of-harmony
ಹಿಂದೂ ದೇವಾಲಯಗಳ ನಿರ್ಮಿಸಿ ಭಾವೈಕ್ಯತೆ ಸಾರಿದ ಸೈಯದ್
author img

By

Published : Apr 14, 2021, 10:35 PM IST

ರಾಮನಗರ: ನಮ್ಮ ದೇಶದ ನೆಲದಲ್ಲಿ ವೈವಿಧ್ಯತೆ, ಧಾರ್ಮಿಕ ಸೌಹಾರ್ದತೆಗೆ ಏನೂ ಕೊರತೆ ಇಲ್ಲ. ಸಾಮರಸ್ಯ ಅನ್ನೋದು ಹಿಂದಿನಿಂದಲೂ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ. ಇಂತಹ ಧಾರ್ಮಿಕ ಸಾಮರಸ್ಯಕ್ಕೆ ತಾಜಾ ಉದಾಹರಣೆಯಾಗಿ ಮುಸ್ಲಿಂ ವ್ಯಕ್ತಿಯೋರ್ವ ನಿರ್ಮಿಸಿದ ಹಿಂದೂ ದೇವಾಲಯ ಕಣ್ಣೆದುರು ನಿಂತಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಂತೆ ಮೋಗೇನಹಳ್ಳಿ ಗ್ರಾಮದಲ್ಲಿ, ತಮ್ಮ ಸ್ವಂತ ಖರ್ಚಿನಲ್ಲಿ ಸೈಯದ್ ಸಾದತ್ ಎಂಬಾತ ಹಿಂದೂ ದೇವಾಲಯ ನಿರ್ಮಿಸಿ ಸೌಹಾರ್ದತೆಗೆ ಮುನ್ನುಡಿಯಾಗಿದ್ದಾರೆ.

ಹಿಂದೂ ದೇವಾಲಯಗಳ ನಿರ್ಮಿಸಿ ಭಾವೈಕ್ಯತೆ ಸಾರಿದ ಸೈಯದ್

ಬದುಕಲು ಹಣ ಮುಖ್ಯವಲ್ಲ ಸಾಮರಸ್ಯವೇ ಮುಖ್ಯ ಎಂದು ನಂಬಿರುವ ಸಾದತ್, ರಾಮನಗರದ ಚನ್ನಪಟ್ಟಣ ಕ್ಷೇತ್ರದವರು. ಇವರು ಚನ್ನಪಟ್ಟಣ ತಾಲೂಕಿನ ಸಂತೆ ಮೋಗೇನಹಳ್ಳಿ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇವಾಲಯ ಕಟ್ಟಿಸಿ ಮಾದರಿಯಾಗಿದ್ದಾರೆ. ವಿಶೇಷ ಅಂದ್ರೆ ಈ ದೇವಾಲಯದ ಕಾಂಪೌಂಡ್ ಒಳಗೆ ಮಸೀದಿಯೂ ಇದ್ದು, ಶಾಂತಿಧಾಮದ ಸಂಕೇತವಾಗಿ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಕೋವಿಡ್ ಕಾಲದಲ್ಲೂ ಸೇವೆ ಮಾಡಿದ್ದ ಸೈಯದ್

2010ರಲ್ಲಿ ಈ ರೀತಿಯ ದೇವಾಲಯ ನಿರ್ಮಾಣಕ್ಕೆ ಮುಂದಾದ ಸೈಯದ್ ಅದರಂತೆ ದೇವಾಲಯ ನಿರ್ಮಾಣ ಮಾಡಿ ಎಲ್ಲ ಮಾನವರಿಗೂ ದೇವನೊಬ್ಬನೇ ಅಂತ ಸಾರಿದ್ದಾರೆ. ಇದಿಷ್ಟೇ ಅಲ್ಲ ಕೋವಿಡ್​​ ಕಷ್ಟದ ಕಾಲದಲ್ಲಿ ಸಾವಿರಾರು ಮಂದಿಗೆ ಉಚಿತವಾಗಿ ಆಹಾರ ಕಿಟ್ ವಿತರಿಸಿ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದ್ದಾರೆ.

ಅಚ್ಚರಿ ಅಂದ್ರೆ ಈ ದೇವಾಲಯವನ್ನ ನಡೆದಾಡುವ ದೇವರು ಅಂತಲೇ ಕರೆಸಿಕೊಂಡಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿ ಅವರು ಲೋಕಾರ್ಪಣೆ ಮಾಡಿದ್ದರು. ಇತ್ತ ಹಿಂದೂ ಹಬ್ಬ ಹರಿದಿನಗಳ ಕುರಿತು ಸೈಯದ್​ಗೆ ಅಪಾರ ಗೌರವವಿದ್ದು, ಜಿಲ್ಲೆಯಲ್ಲಿ ಸಾಮರಸ್ಯದ ಸಾಮಾಜದ ಕನಸು ಕಂಡು ಅದರ ಸಾಕಾರಾಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ.

ಬಸವೇಶ್ವರ ದೇವಾಲಯಕ್ಕೂ ಇವರೇ ಮುಂದಾಳು

ಇದಿಷ್ಟೇ ಅಲ್ಲ ಇದೀಗ ಚನ್ನಪಟ್ಟಣ ನಗರದ ಮಂಗಳವಾರ ಪೇಟೆಯಲ್ಲಿ ಸ್ವಂತ ಖರ್ಚು ಮಾಡಿ ಬಸವೇಶ್ವರ ದೇವಸ್ಥಾನ ನಿರ್ಮಿಸಲೂ ಮುಂದಾಗಿದ್ದಾರೆ. ಈ ಗ್ರಾಮದ ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ, ಈ ಗ್ರಾಮದಲ್ಲಿ ಹಿಂದೂ ದೇವಾಲಯದಲ್ಲಿ ನಡೆಯುವ ಜಾತ್ರೆಗೆ ಮುಸ್ಲಿಂ ಬಾಂಧವರು ಹಾಜರಿರ್ತಾರೆ. ಹಾಗೆಯೇ ಮುಸ್ಲಿಂ ಬಾಂಧವರು ನಡೆಸುವ ಗಂಧ ಮಹೋತ್ಸವಕ್ಕೆ ಹಿಂದೂಗಳು ಪಾಲ್ಗೊಂಡು ಹರಸುತ್ತಾರೆ

ಒಟ್ಟಾರೆ ಜಾತಿ ಜಾತಿಗಳ ನಡುವೆ ವೈಮನಸ್ಸು ಹುಟ್ಟಿಕೊಳ್ಳುತ್ತಿರುವ ಈ ಕಾಲದಲ್ಲಿ ಸೈಯದ್ ಸಾದತ್ ರಂತಹ ವ್ಯಕ್ತಿಗಳು ಮಾದರಿಯಾಗಿ ನಿಲ್ಲುತ್ತಾರೆ. ಇವರು ಮಾಡಿಕೊಂಡು ಬರುತ್ತಿರುವ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.