ರಾಮನಗರ: ನೈಜಿರಿಯಾ ಮೂಲದವರೆನ್ನಲಾದ ನಾಲ್ವರನ್ನು ರಾಮನಗರ ಜಿಲ್ಲಾ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನಿಂದ ಸಿಸಿಬಿ ತಂಡ ಫಾಲೋ ಮಾಡಿದರೂ ಇವರನ್ನು ಬಂಧಿಸಲು ಸಾಧ್ಯವಾಗದ್ದಿದ್ದಾಗ ಬಳಿಕ ರಾಮನಗರದ ಕನಕಪುರ ಸರ್ಕಲ್ ಬಳಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ. ಶೆಟ್ಟಿ ನೇತೃತ್ವದ ತಂಡ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ಎಸ್ಪಿ ಅನೂಪ್ ಎ. ಶೆಟ್ಟಿ ಕಾರ್ಯಾಚರಣೆ ನಡೆಸಿದ್ದು, ಬಂಧಿತರನ್ನು ರಾಮನಗರ ಗ್ರಾಮಾಂತರ ಪೊಲೀಸರ ವಶದಲ್ಲಿರಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.