ETV Bharat / state

ಕೋವಿಡ್​​ ಸೋಂಕಿತರ ಮೇಲೆ ಕಲ್ಲು ತೂರಾಟ: ನೆರೆ ಹೊರೆಯವರಿಂದ ಕೃತ್ಯ: VIDEO

author img

By

Published : May 24, 2021, 9:39 PM IST

Updated : May 24, 2021, 11:28 PM IST

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಹೋಬಳಿಯಲ್ಲಿನ ಕೋವಿಡ್​ ಕೇಂದ್ರಕ್ಕೆ ಕಲ್ಲು ತೂರಾಟ ನಡೆಸಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ವಾಕಿಂಗ್ ಮಾಡಿದರೆ ಸೋಂಕು ನಮಗೂ ಹರಡುತ್ತದೆ ಎಂದು ಕೇಂದ್ರದ ನೆರೆ ಹೊರೆಯವರೇ ಈ ಕೃತ್ಯವೆಸಗಿದ್ದಾರೆ.

ಕೋವಿಡ್​​
ಕೋವಿಡ್​​

ರಾಮನಗರ: ಸೋಂಕಿತರು ಕೋವಿಡ್​ ಕೇಂದ್ರದ ಬಳಿ ವಾಕಿಂಗ್ ಮಾಡಿದ್ರೆ ನಮಗೂ ಕೊರೊನಾ ಬರುತ್ತೆ ಎಂದು ನೆರೆ ಹೊರೆಯವರು ಕೊರೊನಾ ಕೇಂದ್ರಕ್ಕೆ ಕಲ್ಲು ತೂರಾಟ ನಡೆಸಿರುವ ಘಟನೆ ಜರುಗಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಹೋಬಳಿಯಲ್ಲಿನ ಕೋವಿಡ್​ ಕೇಂದ್ರಕ್ಕೆ ಕಲ್ಲು ತೂರಾಟ ನಡೆಸಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ವಾಕಿಂಗ್ ಮಾಡಿದ್ರೆ ಸೋಂಕು ನಮಗೂ ಹರಡುತ್ತದೆ ಎಂದು ಕೇಂದ್ರದ ನೆರೆ ಹೊರೆಯವರು ಕಲ್ಲು ಹೊಡೆದಿದ್ದಾರೆ.

ಈ ಸಂಬಂಧ ಕ್ವಾರಂಟೈನ್ ಕೇಂದ್ರದಲ್ಲಿರುವ ಸೋಕಿಂತರು ಮಾತನಾಡಿ, ಊಟ, ತಿಂಡಿ ಮಾಡಿದ ಮೇಲೆ ಮಹಡಿಯ ಮೇಲೆ ವಾಕಿಂಗ್ ಮಾಡುವಾಗ ನೀವು ಹೂರಗಡೆ ಬರಬೇಡಿ. ಒಳಗೆ ಇರಿ ಎಂದು ಬೈದು ಕಲ್ಲು ಎಸೆದಿದ್ದಾರೆ. ಇದರಿಂದ ಕ್ವಾರಂಟೈನ್ ಕೇಂದ್ರದಲ್ಲಿ ನಮಗೆ ತೀವ್ರ ಕಿರಿಕಿರಿ ಉಂಟಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ಬರುವವರೆಗೂ ನಾವು ಊಟ ಮಾಡುವುದಿಲ್ಲ ಎಂದು ಗಲಾಟೆ ಮಾಡುತ್ತಿದ್ದರು.

ಕೋವಿಡ್​​ ಸೋಂಕಿತರ ಮೇಲೆ ಕಲ್ಲು ತೂರಟ

ಈ ಸಂಬಂಧ ಸ್ಥಳಕ್ಕೆ ಕುದೂರು ಠಾಣೆಯ ಪಿಎಸ್​ಐ ಕೆ.ಬಿ. ಪುಟ್ಟಗೌಡ ಭೇಟಿ ನೀಡಿ, ಸೋಂಕಿತರನ್ನು ಮನವೊಲಿಸಿ ಕಲ್ಲು ತೂರಾಟ ಮಾಡಿದವರನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.

ಮಾಜಿ ಸಿಎಂ ಹೆಚ್‌ಡಿಕೆ ವಿಡಿಯೋ ಕಾನ್ಫರೆನ್ಸ್‌

ವಿಷಯ ತಿಳಿಯುತ್ತಲೇ, ಚನ್ನಪಟ್ಟಣ ತಹಶೀಲ್ದಾರ್‌ ಅವರನ್ನು ಸ್ಥಳಕ್ಕೆ ಕಳುಹಿಸಿದ ಹೆಚ್‌ಡಿಕೆ, ತಹಶೀಲ್ದಾರ್‌ ಅವರಿಂದಲೇ ವಿಡಿಯೋ ಕರೆ ಮಾಡಿಸಿ, ಸೋಂಕಿತರನ್ನು ಸಂಪರ್ಕಿಸಿದರು. ಎಲ್ಲರ ಅಹವಾಲು ಆಲಿಸಿ, ಸಮಸ್ಯೆ ಸರಿಪಡಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾದರೆ ನೇರವಾಗಿ ತಮಗೇ ಕರೆ ಮಾಡುವಂತೆ ತಿಳಿಸಿದರು.

ಮಾಜಿ ಸಿಎಂ ಎಚ್‌ಡಿಕೆ ವಿಡಿಯೋ ಕಾನ್ಫರೆನ್ಸ್‌

ಚನ್ನಪಟ್ಟಣದ ತಹಶೀಲ್ದಾರ್‌ ಅವರು ತಾಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌ ತಡೆಗಟ್ಟಲು ಕಟ್ಟು ನಿಟ್ಟಿನ ಕೆಲಸ ಮಾಡುತ್ತಿದ್ದಾರೆ. ಜನರೂ ಅವರಿಗೆ ಸಹಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು.

Last Updated : May 24, 2021, 11:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.