ರಾಮನಗರ : ಬಿಜೆಪಿಯ ನೂತನ ಮಂತ್ರಿಮಂಡಲ ರಚನೆ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದಲ್ಲಿ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯಕ್ಕೆ ಆಗಮಿಸಲಿದ್ದಾರೆ ಅಮಿತ್ ಶಾ!
ನಗರದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪನವರ ಮಂತ್ರಿಮಂಡಲ ಸರಿಯಿಲ್ಲ. ಅವರಿಗೆ ಹೇಳೋರು, ಕೇಳೋರು ಯಾರು ಇಲ್ಲದೆ, ಬೇಕಾಬಿಟ್ಟಿಯಾಗಿ ಮಂತ್ರಿಮಂಡಲ ರಚನೆ ಮಾಡಿದ್ದಾರೆ. ಎಂಟಿಬಿ ಹಣವಂತ, ನಿರಾಣಿ ಹಣವಂತ ಹಾಗಾಗಿ ಮಂತ್ರಿ ಮಾಡಿದ್ದಾರೆ ಎಂದರು.
ಯೋಗೇಶ್ವರ್ಗೆ ಯಾಕೆ ಮಂತ್ರಿ ಸ್ಥಾನ ನೀಡಿದ್ದಾರೆ, ಸೋತವರಿಗೂ ಎಂಎಲ್ಸಿ ಮಾಡಿ, ವಿಧಾನಸೌಧದಲ್ಲಿ ಮಾಡಬಾರದ ಅನಾಚಾರ ಮಾಡಿದ್ದಾರೆ. ಬಾಂಬೆಯಲ್ಲಿ ಎಂಎಲ್ಎಗಳನ್ನ ಇಟ್ಟುಕೊಂಡು ಸರ್ಕಾರ ಕೆಡವಿದರು. ಯಡಿಯೂರಪ್ಪನವರ ಮಂತ್ರಿಮಂಡಲಕ್ಕೆ ಬೆಲೆಯಿಲ್ಲ, ಬ್ಲ್ಯಾಕ್‌ಮೇಲ್ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ವ್ಯಂಗ್ಯವಾಡಿದರು.
ಇವತ್ತು ಮಂತ್ರಿಮಂಡಲದಲ್ಲಿ ವ್ಯಾಪಾರ ನಡೆಯುತ್ತಿದ್ದು, ಕೆಲವರು ವ್ಯಾಪಾರ ಮಾಡಿ ಮಂತ್ರಿಯಾಗ್ತಿದ್ದಾರೆ. ಯತ್ನಾಳ್ ಹಾಗೂ ರೇಣುಕಾಚಾರ್ಯ ಮಂತ್ರಿಯಾಗಬೇಕಿತ್ತು. ಮೈಸೂರು, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳಿಗೆ ಮಂತ್ರಿ ಸ್ಥಾನ ಇಲ್ಲ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.