ETV Bharat / state

ಲಾಕ್​​​ಡೌನ್​​ನಲ್ಲಿ ಬಾಲಕನ ಸಾಧನೆ: ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ ರಾಮನಗರದ ವಿದ್ಯಾರ್ಥಿ - ಬ್ಯಾಟರಿ ಚಾಲಿತ ಸೈಕಲ್

ಲಾಕ್​ಡೌನ್ ಸಮಯದಲ್ಲಿ ಸುಮಾರು 10 ಸಾವಿರ ರೂ. ಖರ್ಚು ಮಾಡಿ ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ್ದಾನೆ ರಾಮನಗರದ ವಿದ್ಯಾರ್ಥಿ. ಈತನ ತಂದೆ ಅಂಗಡಿಯೊಂದನ್ನ ಇಟ್ಟುಕೊಂಡು ಮರಗೆಲಸ ಮಾಡಿಕೊಂಡಿದ್ದಾರೆ. ಲಾಕ್​​​​ಡೌನ್ ವೇಳೆಯಲ್ಲಿ ಶಾಲೆ ಇರಲಿಲ್ಲ ಎಂಬ ಕಾರಣಕ್ಕೆ ತಂದೆಗೆ ಅಂಗಡಿಯಲ್ಲಿ ಸಹಾಯ ಮಾಡಿಕೊಂಡೇ ಸೈಕಲ್ ತಯಾರಿಸಿ ಸೈ ಎನಿಸಿಕೊಂಡಿದ್ದಾನೆ ಬಾಲಕ.

sslc-student-who-manufactures-a-battery-powered-bicycle
ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ ಎಸ್​ಎಸ್​ಎಲ್​​​ಸಿ ವಿದ್ಯಾರ್ಥಿ
author img

By

Published : Jul 29, 2021, 4:55 PM IST

Updated : Jul 29, 2021, 5:36 PM IST

ರಾಮನಗರ: ಈತ ಎಸ್ಎಸ್ಎಲ್​ಸಿ ಓದುತ್ತಿರುವ ವಿದ್ಯಾರ್ಥಿ. ಲಾಕ್​​ಡೌನ್ ಸಮಯದಲ್ಲಿ ಶಾಲೆ ಇಲ್ಲದೆ ತಂದೆಯ ಕೆಲಸದಲ್ಲಿ ಸಹಾಯ ಮಾಡಿಕೊಂಡಿದ್ದ. ಈ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಿರುವುದನ್ನ ಗಮನಿಸಿದ ಈ ಬಾಲಕ ಬ್ಯಾಟರಿಯಿಂದ ಚಲಿಸುವ ಸೈಕಲ್ ತಯಾರಿಸಿ ಗಮನ ಸೆಳೆದಿದ್ದಾನೆ.

ಹೀಗೆ ಬ್ಯಾಟರಿ ಚಾಲಿತ ಸೈಕಲ್​​​ ಓಡಿಸುತ್ತಿರುವ ಬಾಲಕನ ಹೆಸರು ಯೋಗೇಶ್. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದ ವಿದ್ಯಾರ್ಥಿ. ಊರಿನ ಸಮೀಪದಲ್ಲೇ ಇರುವ ಕೃಷ್ಣಯ್ಯನದೊಡ್ಡಿ ಗ್ರಾಮದ ವಿಶ್ವಯೋಗಿ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಓದಿನಲ್ಲೂ ಸೈ ಎನಿಸಿಕೊಂಡಿರುವ ವಿದ್ಯಾರ್ಥಿ ಯೋಗೇಶ್, ಬಳಕೆಯಾಗದ ವಸ್ತುಗಳನ್ನ ಇಟ್ಟುಕೊಂಡು ವಿನೂತನ ಬೈಸಿಕಲ್ ತಯಾರಿಸಿದ್ದಾನೆ.

ಬ್ಯಾಟರಿ ಚಾಲಿತ ಸೈಕಲ್ ತಯಾರಿಸಿದ ರಾಮನಗರದ ವಿದ್ಯಾರ್ಥಿ

ಮೊದಲ ಬಾರಿ ಪ್ರಯತ್ನಿಸಿದ್ದಾಗ ಸೈಕಲ್​ಗೆ ಅಳವಡಿಸಿದ್ದ ಬ್ಯಾಟರಿ ಸುಟ್ಟು ಹೋಗಿತ್ತಂತೆ. ಆದ್ರೆ ಮರಳಿ ಯತ್ನವ ಮಾಡುವ ಎಂಬ ಮಾತಿನಂತೆ ಮತ್ತೆ ಪ್ರಯತ್ನಿಸಿ ಇದೀಗ ಯಶಸ್ವಿಯಾಗಿದ್ದಾನೆ. ಅಂದಹಾಗೆ, ಈ ಬ್ಯಾಟರಿ ಸೈಕಲ್ ತಯಾರಿಸಲು ಸುಮಾರು 10 ಸಾವಿರ ರೂ. ಖರ್ಚಾಗಿದೆ ಎಂದು ಯೋಗೇಶನ ಶಿಕ್ಷಕರು ತಿಳಿಸಿದ್ದಾರೆ.

ಹೀಗೆ ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣದಲ್ಲೇ ಎಲ್ಲಾ ವಸ್ತುಗಳನ್ನ ಖರೀದಿಸಿ ಸೈಕಲ್ ತಯಾರಿಕೆಗೆ ಬಳಸಿದ್ದಾನೆ. ಬ್ಯಾಟರಿ ಸೈಕಲ್ ತಯಾರಿಸಿ ಗ್ರಾಮದಲ್ಲಿ ಮನೆ ಮಾತಾಗಿದ್ದಾನೆ. ಅಲ್ಲದೆ ಮಗನ ಈ ಸೈಕಲ್​ ನೋಡಿ ಪೋಷಕರು ಸಹ ಸಂತಸ ವ್ಯಕ್ತಪಡಿಸುತ್ತಾರೆ.

ಒಟ್ಟಾರೆ ಲಾಕ್​ಡೌನ್​ ಸಮಯ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿ ಯೋಗೇಶ್ ಮಾಡಿರುವ ಸಾಧನೆಯನ್ನ ನಿಜಕ್ಕೂ ಮೆಚ್ಚಲೇಬೇಕು. ಬಿಡುವಿನ ವೇಳೆ ಈತ ಮಾಡಿರುವ ಆಲೋಚನೆ ಮತ್ತು ಕೆಲಸ ಇತರೆ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂಬುದು ಎಲ್ಲರ ಆಶಯ.

Last Updated : Jul 29, 2021, 5:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.