ರಾಮನಗರ: ಬೈಕ್ನಲ್ಲಿ ಬಂದ ಮೂವರು ದರೋಡೆಕೋರರು ಇನ್ನೊಂದು ಬೈಕ್ನಲ್ಲಿ ಬರುತ್ತಿದ್ದ ದಂಪತಿ ಬೆದರಿಸಿ, ದರೋಡೆ ನಡೆಸಿದ್ದಾರೆ. ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿ ಪ್ರಗತಿ ಸ್ಪೋರ್ಟ್ಸ್ ಕ್ಲಬ್ ಬಳಿ ಈ ಘಟನೆ ನಡೆದಿದೆ.
ತಾಲೂಕಿನ ಎ.ವಿ.ಹಳ್ಳಿಯ ಕೃಷ್ಣೇಗೌಡ ಮತ್ತು ಅವರ ಪತ್ನಿ ದರೋಡೆಗೆ ಒಳಗಾದವರು. ಸದ್ಯ ಚನ್ನಪಟ್ಟಣದಲ್ಲಿ ವಾಸವಿರುವ ಕೃಷ್ಣೇಗೌಡ ದಂಪತಿ ತಮ್ಮ ಸ್ವಗ್ರಾಮ ಎ.ವಿ.ಹಳ್ಳಿಗೆ ಹೋಗಿ ಅಲ್ಲಿ ಕೃಷಿ ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದರು.
ಈ ವೇಳೆ, ಪಲ್ಸರ್ ಬೈಕ್ನಲ್ಲಿ ಬಂದ ಮೂರು ಮಂದಿ ವಿಳಾಸ ಕೇಳುವ ನೆಪದಲ್ಲಿ ಬೈಕ್ ಅಡ್ಡಗಟ್ಟಿದ್ದಾರೆ. ನಂತರ ಕೃಷ್ಙೇಗೌಡರ ಕೊರಳಿಗೆ ಲಾಂಗ್ ಇಟ್ಟು, ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ, ಕೃಷ್ಣೇಗೌಡ ತಮ್ಮ ಬಳಿ ಹಣವಿಲ್ಲ, ಕೃಷಿ ಕೆಲಸ ಮುಗಿಸಿ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬಳಿಕ ಪತ್ನಿಯ ಕೊರಳಲ್ಲಿನ ಮಾಂಗಲ್ಯ ಸರವನ್ನು ತೆಗೆದುಕೊಡುವಂತೆ ಕೇಳಿದ್ದಾರೆ. ಇದಕ್ಕೆ ಕೃಷ್ಣೇಗೌಡರ ಪತ್ನಿ ಶೃತಿ ಒಪ್ಪದಿದ್ದಾಗ ಕೊರಳಿಗೆ ಕೈ ಹಾಕಿ ಮಂಗಲ್ಯ ಸರ ಕಸಿಯುವ ವೇಳೆ ಸರ ತುಂಡಾಗಿ ಒಂದು ಭಾಗ ದರೋಡೆಕೋರರಿಗೆ ಮತ್ತೊಂದು ಭಾಗ ಶೃತಿ ಕೈಯಲ್ಲಿ ಉಳಿದಿದೆ. ಈ ವೇಳೆ ಯಾರೋ ಬರುತ್ತಿರುವುದನ್ನು ಗಮನಿಸಿದ ದರೋಡೆಕೋರರು ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ.
ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದಲ್ಲಿ ಒಂದಿಲ್ಲೊಂದು ಕಡೆ ದರೋಡೆ, ಸರಗಳ್ಳತನ, ಮನೆ ಕಳುವು ಹೆಚ್ಚುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಿದೆ. ಪ್ರಮುಖ ರಸ್ತೆಗಳು, ಮತ್ತು ಅವುಗಳ ತಿರುವುಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಟಿವಿಗಳನ್ನು ಅಳವಡಿಸಿ, ಇಂತಹ ಕೃತ್ಯಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸ್ಫೋಟಕ ವಸ್ತುಗಳು ಸಾಗಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ.. ನೂರಾರು ಮನೆಗಳು ನಾಶ, 17 ಮಂದಿ ಸಾವು