ETV Bharat / state

ರಾಮನಗರ: ನೀರಿನ ಸಂಪಿಗೆ ಬಿದ್ದು 2 ವರ್ಷದ ಮಗು ಸಾವು - Magadi Police Station

ಆಟವಾಡುತ್ತಿದ್ದ 2 ವರ್ಷದ ಗಂಡು ಮಗು ಆಯತಪ್ಪಿ ನೀರಿನ ಸಂಪಿಗೆ ಬಿದ್ದು ಸಾವನಪ್ಪಿರುವ ಘಟನೆ ಇಲ್ಲಿನ ಮಾಗಡಿಯ ಹೊಸಹಳ್ಳಿಯಲ್ಲಿ ನಡೆದಿದೆ. ನೀರಿನ ಸಂಪಿನಿಂದ ಮಗುವನ್ನು ಮೇಲೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ಮಗು ಬದುಕುಳಿಯಲಿಲ್ಲ.

Ramanagara: A 2-year-old boy dies after falling into water pool
ರಾಮನಗರ: ನೀರಿನ ಸಂಪಿಗೆ ಬಿದ್ದು 2 ವರ್ಷದ ಮಗು ಸಾವು
author img

By

Published : Jun 10, 2020, 11:23 PM IST

ರಾಮನಗರ‌: ನೀರಿನ‌ ಸಂಪಿಗೆ‌ ಬಿದ್ದು 2 ವರ್ಷದ ಮಗು‌‌ ಸಾವನ್ನಪ್ಪಿರುವ ಘಟನೆ‌‌ ಮಾಗಡಿಯ ಹೊಸಹಳ್ಳಿಯಲ್ಲಿ ನಡೆದಿದೆ. ನರಸಿಂಹ ಮೂರ್ತಿ ಮತ್ತು ಕವಿತಾ ದಂಪತಿ‌ಯ ಗಂಡು ಮಗು ಹೃತ್ವಿಕ್ ಗೌಡ ಸಾವನ್ನಪ್ಪಿದೆ.

ತಾಯಿ ನೀರು ತುಂಬಿದ್ದ ಕೊಡ ಮನೆಯೊಳಗೆ ಇಡಲು ತೆರಳಿದ್ದಾಗ ಆಟವಾಡುತ್ತಿದ್ದ ಮಗು ನೀರಿನ ಸಂಪಿಗೆ ಬಿದ್ದಿದೆ. ಬಳಿಕ ತಾಯಿ ಮಗು ಇಲ್ಲೆ ಎಲ್ಲೊ ಆಟವಾಡುತ್ತಿರಬೇಕು ಎಂದು ಸುಮ್ಮನಾಗಿದ್ದಾರೆ. ಕೆಲಹೊತ್ತಿನ ಬಳಿಕ ಅನುಮಾನ ಬಂದು ಹುಡುಕಾಟ ನಡೆಸಿದಾಗ ಮಗು ಸಂಪಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲೇ ಮಗು ಸಾವನಪ್ಪಿತ್ತು. ಸಾರ್ವಜನಿಕ‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸ್ವಗ್ರಾಮ ಹೊಸಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಈ ಸಂಬಂಧ ಮಾಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.