ETV Bharat / state

ರೈತರಿಂದ ನೇರವಾಗಿ ಬೆಳೆ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಲು ಮುಂದಾದ ರೈತ ಸಂಘಟನೆ - ರಾಮನಗರ ರೈತ ಸಂಜೀವಿನಿ ಮಾರುಕಟ್ಟೆ

ತರಕಾರಿಯಿಂದ ಹಿಡಿದು ರಾಗಿ ಹಿಟ್ಟು, ಗೋಧಿಹಿಟ್ಟು, ಎಣ್ಣೆಕಾಳುಗಳು, ದವಸ ದಾನ್ಯಗಳು, ಗಾಣದಿಂದ ತಯಾರಾದ ಶುದ್ಧ ಎಣ್ಣೆ ಸೇರಿದಂತೆ ಮುಂತಾದ ಆಹಾರ ಉತ್ಪನ್ನಗಳನ್ನ 'ರೈತ ಸಂಜೀವಿನಿ' ಎಂಬ ಹೆಸರಿನಡಿ ಮಾರಾಟ ಮಾಡಲಾಗುತ್ತಿದೆ.

raitha-sanjeevini-market-started-in-ramanagar
ರೈತ ಸಂಘಟನೆ
author img

By

Published : Oct 22, 2021, 4:58 PM IST

ರಾಮನಗರ: 'ರೈತ ಸಂಜೀವಿನಿ' ಎಂಬ ಹೆಸರಿನಡಿ ರಾಜ್ಯ ಕೃಷಿ ಉತ್ಪಾದಕರ ರೈತ ಸಂಘದಿಂದ ನೈಸರ್ಗಿಕವಾಗಿ ಬೆಳೆದ ತರಕಾರಿ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ನೇರವಾಗಿ ರೈತರಿಂದ ಖರೀದಿಸಿ ಗ್ರಾಹಕರಿಗೆ ಭಾರಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ಈ ಒಂದು ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭ ಮಾಡಲಾಗಿದೆ. ಮಧ್ಯವರ್ತಿಗಳ ಕಾಟವಿಲ್ಲದೇ ಆರೋಗ್ಯಕರ ತರಕಾರಿ, ದವಸ ದಾನ್ಯಗಳನ್ನು ನೇರವಾಗಿ ರೈತರಿಂದ ಪಡೆದು ಗ್ರಾಹಕರಿಗೆ ಮಾರಾಟ ಮಾಡುವುದೇ ಇದರ ಉದ್ದೇಶವಾಗಿದೆ.

ತರಕಾರಿಯಿಂದ ಹಿಡಿದು ರಾಗಿ ಹಿಟ್ಟು, ಗೋಧಿಹಿಟ್ಟು, ಎಣ್ಣೆಕಾಳುಗಳು, ದವಸ ದಾನ್ಯಗಳು, ಗಾಣದಿಂದ ತಯಾರಾದ ಶುದ್ಧ ಎಣ್ಣೆ ಸೇರಿದಂತೆ ಮುಂತಾದ ಆಹಾರ ಉತ್ಪನ್ನಗಳನ್ನ 'ರೈತ ಸಂಜೀವಿನಿ' ಎಂಬ ಹೆಸರಿನಡಿ ಮಾರಾಟ ಮಾಡಲಾಗುತ್ತಿದೆ.

ರಾಜ್ಯ ಕೃಷಿ ಉತ್ಪಾದಕರ ರೈತ ಸಂಘದಿಂದ ಉತ್ತಮ ಗುಣಮಟ್ಟದ ಮತ್ತು ಕಲಬೆರಕೆ ಇಲ್ಲದ ಆಹಾರದ ಪದಾರ್ಥಗಳನ್ನ ಸಂಘದ ಮೂಖಾಂತರವೇ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಗ್ರಾಮದಲ್ಲಿ ಪ್ರಾರಂಭಗೊಂಡು ನಂತರ ದಿನಗಳಲ್ಲಿ ಹಂತ ಹಂತವಾಗಿ ರಾಜ್ಯಾದ್ಯಂತ ರೈತರು ಬೆಳೆದ ಬೆಳೆಯನ್ನ ನೇರವಾಗಿ ಗ್ರಾಹಕರಿಗೆ ತಲುಪಿಸುವ ಗುರಿಯನ್ನ ಸಂಘಟನೆ ಹೊಂದಿದೆ ಎಂದು ರೈತ ಸಂಘದ ಮುಖಂಡರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.