ರಾಮನಗರ: ತನ್ನ ತವರು ಮನೆಯಲ್ಲೇ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಮಂಜುನಾಥನಗರ ಬಡಾವಣೆಯಲ್ಲಿ ನಡೆದಿದೆ. ಗಂಡನ ಕಿರುಕುಳವೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಜಾನ್ಹವಿ (23) ಆತ್ಮಹತ್ಯೆಗೆ ಶರಣಾದ ಗರ್ಭಿಣಿಯಾಗಿದ್ದು, ಕಳೆದ 9 ತಿಂಗಳ ಹಿಂದೆ ಕರ್ಣ ಎಂಬುವನ ಜೊತೆ ವಿವಾಹವಾಗಿತ್ತು. ಕರ್ಣ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದವನಾಗಿದ್ದು, ಕಳೆದ ಹಲವು ತಿಂಗಳಿಂದ ತಮ್ಮ ಮಗಳಿಗೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದ ಎಂದು ಜಾನ್ಹವಿ ಪೋಷಕರು ಆರೋಪಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಗಂಡನ ಹಿಂಸೆ ತಾಳಲಾಗದೇ ಐದು ತಿಂಗಳ ಗರ್ಭಿಣಿ ಜಾನ್ಹವಿ ಕಳೆದ ಒಂದು ತಿಂಗಳ ಹಿಂದೆ ತವರು ಮನೆಗೆ ಬಂದು ವಾಸವಿದ್ದಳು. ತವರು ಮನೆಗೆ ಬಂದರೂ ಪತಿ ಫೋನ್ ಕರೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳ ತಾಳಲಾರದೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹಗ್ಗಕ್ಕೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
![pregnant-woman-committed-suicide-in-ramanagara](https://etvbharatimages.akamaized.net/etvbharat/prod-images/r-kn-rmn-03-26012022-suside-imp-ka10051_26012022195731_2601f_1643207251_452.jpg)
ಮನೆಯಲ್ಲಿದ್ದ ತಾಯಿ ಕೂಡ ಕೆಲಸಕ್ಕೆಂದು ಹೊರಗೆ ಹೋಗಿದ್ದ ವೇಳೆ ಜಾನ್ಹವಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಐಜೂರು ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಗರ್ಭಿಣಿಗೆ ಹೆರಿಗೆ ಮಾಡಿಸಲು ವೈದ್ಯರು ಹಿಂದೇಟು.. ರಸ್ತೆಯಲ್ಲೇ ಶಿಶುವಿಗೆ ಜನ್ಮ ನೀಡಿದ ತಾಯಿ!