ETV Bharat / state

ರಾಮನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾ ಪ್ರಜೆಗಳ ಬಂಧನ.. ಮಹಿಳೆ ಪರಾರಿ - ರಾಮನಗರದಲ್ಲಿ ವಾಸಿಸುತ್ತಿದ್ದ 7 ಮಂದಿ ಬಾಂಗ್ಲಾ ಪ್ರಜೆಗಳ ಬಂಧನ

ದೇಶದ ಗಡಿ ದಾಟಿ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ 7 ಮಂದಿ ಬಾಂಗ್ಲಾ ಪ್ರಜೆಗಳು- ರಾಮನಗರ ಗ್ರಾಮಾಂತರ ಠಾಣೆ ಪೊಲೀಸರಿಂದ ಬಂಧನ- ಮತ್ತೋರ್ವ ಮಹಿಳಾ ಆರೋಪಿ ಎಸ್ಕೇಪ್

7 Illegal Bangladesh Nationals arrest
7 ಮಂದಿ ಬಾಂಗ್ಲಾ ಪ್ರಜೆಗಳ ಬಂಧನ
author img

By

Published : Jul 13, 2022, 2:29 PM IST

ರಾಮನಗರ: ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸೂಕ್ತ ದಾಖಲೆಗಳಿಲ್ಲದೇ ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 7 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ.

'ನಗರದ ಹೊರವಲಯದ ಬಸವನಪುರ ಗ್ರಾಮದಲ್ಲಿರುವ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಅಕ್ರಮವಾಗಿ ವಿದೇಶಿ ಪ್ರಜೆಗಳು ಬಂದು ಕೆಲಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ವೇಳೆ ಮೊಹಮ್ಮದ್ ಸೊಹಿಲ್ ರಾಣಾ, ಜುಲ್ಸಿಕರ್ ಅಲಿ, ಉಜಲ್, ಮೊಹಮ್ಮದ್ ಮಿನ್ಹಾ ಜುಲ್ ಹುಸ್ಸೆನ್, ಮುಸ್ಸಾ ಶೇಖ್, ರಹೀಂ, ಮತ್ತು ಆರಿ ಫುಲ್ ಇಸ್ಲಾಂ ಎಂಬುವರನ್ನು ಬಂಧಿಸಲಾಗಿದೆ' ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಮಾಹಿತಿ ನೀಡಿದ್ದಾರೆ.

ಬಾಂಗ್ಲಾದಲ್ಲಿ ಉದ್ಯೋಗ ಸಿಗದ ಕಾರಣ ರಾಮನಗರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದ ಇರವನ್ನು ಮದ್ರಾಸ್​ನಿಂದ ಗಾರ್ಮೆಂಟ್ಸ್​ನ ಪಿಆರ್​ಒ ಕರೆತಂದಿದ್ದರು ಎಂಬ ಸತ್ಯವನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಒಡಿಶಾ, ಅಸ್ಸೋಂ, ಬಶ್ಚಿಮ ಬಂಗಾಳ ರಾಜ್ಯಗಳ ಗುರುತಿನ ಚೀಟಿ, ಆಧಾರ್ ಕಾರ್ಡ್​ಗಳ ಮೂಲಕ ಇಲ್ಲಿಗೆ ಒಟ್ಟು 8 ಮಂದಿ ಬಂದಿದ್ದಾರೆ. ಈಗಾಗಲೇ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ಇವರೊಂದಿಗೆ ಇದ್ದ ಓರ್ವ ಮಹಿಳೆ ತಲೆ ಮರೆಸಿಕೊಂಡಿದ್ದಾಳೆ. ಆಕೆಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ನಟ ಸುಶಾಂತ್ ಸಿಂಗ್‌ಗೆ ಗಾಂಜಾ ನಶೆ ಏರಿಸಿದ್ದೇ ರಿಯಾ ಚಕ್ರವರ್ತಿ: ಎನ್​ಸಿಬಿ ಚಾರ್ಜ್​ಶೀಟ್ ಸಲ್ಲಿಕೆ ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.