ETV Bharat / state

ವೈದ್ಯಾಧಿಕಾರಿಗೂ ತಗುಲಿದ ಕೊರೊನಾ: ಚಿಕಿತ್ಸೆ ಪಡೆದವರಲ್ಲಿ ಆತಂಕ

ಸುಗ್ಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಕೊರೊನಾ ಸೋಂಕು ದೃಢವಾಗಿದೆ. ಅಲ್ಲದೆ ಸುಮಾರು 300ಕ್ಕೂ ಅಧಿಕ ಮಂದಿ ಇವರ ಬಳಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಇದೀಗ ಚಿಕಿತ್ಸೆ ಪಡೆದವರಲ್ಲೂ ಆತಂಕ ಶುರುವಾಗಿದೆ.

author img

By

Published : Jul 2, 2020, 7:30 PM IST

physician got Corona positive: He treated several patients in Ramnagar
ವೈದ್ಯಾಧಿಕಾರಿಗೂ ತಗುಲಿತು ಕೊರೊನಾ: ಚಿಕಿತ್ಸೆ ಪಡೆದವರಿಗೂ ಆತಂಕ

ರಾಮನಗರ: ನಗರದ 12ನೇ ವಾರ್ಡ್​​ನ ನಿವಾಸಿ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ತಾಲೂಕಿನ ಸುಗ್ಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಇವರು ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಮನೆಯನ್ನು ಸೀಲ್​ ​ಡೌನ್ ಮಾಡಲಾಗಿದೆ. ಇವರ ಪತ್ನಿ ಮಾಲೀಕತ್ವದ ನಿಧಾ ನರ್ಸಿಂಗ್ ಹೋಮ್​ ಕೂಡ ಸೀಲ್ ​ಡೌನ್​​ ಮಾಡಲಾಗಿದೆ.

ಸುಮಾರು 300ಕ್ಕೂ ಅಧಿಕ ಮಂದಿ ಇಲ್ಲಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಕಳೆದ 10 ದಿನಗಳಿಂದ ನರ್ಸಿಂಗ್ ಹೋಮ್​​ ಹಾಗೂ ಸುಗ್ಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದ ಸಾರ್ವಜನಿಕರು ಕೂಡಲೇ ಕೊರೊನಾ ತಪಾಸಣೆಗೆ ಒಳಗಾಗಬೇಕು. ಸ್ವಯಂ ಕ್ವಾರಂಟೈನ್​​​ಗೆ ಒಳಗಾಗಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳ‌ ಕಚೇರಿ ಹಾಗೂ ನಗರಸಭೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.