ETV Bharat / state

ಈಗ ವಿಮಾನ, ಮುಂದೆ ವಿಧಾನಸೌಧವನ್ನೇ ಖಾಸಗೀಕರಣ ಮಾಡ್ತಾರೆ: ಡಿಕೆ ಸುರೇಶ್​ ಕಿಡಿ - ಸಂಸದ ಡಿ.ಕೆ ಸುರೇಶ್

ಕೇಂದ್ರ ಸರ್ಕಾರ ಲೋಕಸಭಾ ಅಧಿವೇಶನ ಕರೆಯಲಿ ಅಂತಾ ಎಲ್ಲಾ ವಿರೋಧ ಪಕ್ಷಗಳು ಕಾಯುತ್ತಿವೆ. ಸರ್ಕಾರದ ವೈಫಲ್ಯಗಳನ್ನ ಜನರ ಮುಂದೆ ತರುತ್ತೇವೆ.‌ ಜನತೆ ಕೂಡ ಭ್ರಮೆಯಲ್ಲಿದ್ದಾರೆ, ಅಲ್ಲದೆ ಬಿಜೆಪಿಯವರು ಭಾವನಾತ್ಮಕವಾಗಿ ಜನರನ್ನ ಸೆಳೆಯುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್​ ಆರೋಪಿಸಿದ್ದಾರೆ.

protest
ಪ್ರತಿಭಟನೆ
author img

By

Published : Aug 20, 2020, 6:55 PM IST

ರಾಮನಗರ: ಸರ್ಕಾರ ಹಾಗೂ ಸಚಿವರು ಎಲ್ಲೆಲ್ಲಿ ದುಡ್ಡು ಸಿಗುತ್ತೆ ಅಂತ ನೋಡಿಕೊಂಡು ಕಾಲ ಕಳೆಯುತ್ತಿದ್ದಾರೆ. ರಾಜಕಾರಣ ಮಾಡೋದು ಹಾಗೂ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಾ ಜನರನ್ನು ದಾರಿ ತಪ್ಪಿಸುವ‌ ಕಾರ್ಯದಲ್ಲೇ ದಿನ‌ಕಳೆಯುತ್ತಿರುವುದನ್ನ ಕಳೆದ‌ ಐದು ತಿಂಗಳಿಂದ‌ ನೋಡಿಕೊಂಡು ಬಂದಿದ್ದೇವೆ ಎಂದು ಸಂಸದ ಡಿ.ಕೆ ಸುರೇಶ್ ಸರ್ಕಾರದ ವಿರುದ್ದ ವಾಗ್ದಾಳಿ‌ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ರಾಜೀವ್ ಗಾಂಧಿ ಅವರ ಜನ್ಮದಿನಾಚರಣೆ ಹಾಗೂ ದೇವರಾಜು ಅರಸು ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ‌ ಜನವಿರೋಧಿ‌ ನೀತಿ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ಸಂಪೂರ್ಣ ವಿಫಲವಾಗಿದೆ. ಪ್ರವಾಹ, ಕೊರೊನಾ ಏನೇ ಬಂದರೂ ಜನ ಸಾಯಬೇಕೆ ಹೊರತು ಸರ್ಕಾರ ಕಾಯುವ ಕೆಲ‌ಸ‌ ಮಾಡುತ್ತಿಲ್ಲ ಬದಲಿಗೆ ಮೂರು ನಾಮ‌ ಹಾಕ್ತಿದೆ ಹೊರತು ಬೇರೇನೂ ಇಲ್ಲಾ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಲೋಕಸಭಾ ಅಧಿವೇಶನ ಕರೆಯಲಿ ಅಂತಾ ಎಲ್ಲಾ ವಿರೋಧ ಪಕ್ಷಗಳು ಕಾಯುತ್ತಿವೆ .ಸರ್ಕಾರದ ವೈಫಲ್ಯಗಳನ್ನ ಜನರ ಮುಂದೆ ತರುತ್ತೇವೆ.‌ ಜನತೆ ಕೂಡ ಭ್ರಮೆಯಲ್ಲಿದ್ದಾರೆ, ಅಲ್ಲದೆ ಭಾವನಾತ್ಮಕವಾಗಿ ಅವರು ಜನರನ್ನ ಸೆಳೆದಿದ್ದಾರೆ. ನಮ್ಮ‌ ರಾಷ್ಟ್ರೀಯ ನಾಯಕರೂ ಕೂಡ ಮಾಧ್ಯಮಗಳ‌ ಮೂಲಕ ಜನರಿಗೆ ಸತ್ಯ ಹೇಳುತ್ತಿದ್ದಾರೆ. ಆದರೆ ಜನರನ್ನ ಭಾವನಾತ್ಮಕವಾಗಿ ಬಿಜೆಪಿಗರು ನಂಬಿಸುತ್ತಿದ್ದಾರೆ ಎಂದ ಅವರು ಇನ್ನು ಹತ್ತು ವರ್ಷ ಅವರಿಗೆ ಅಧಿಕಾರ ಕೊಟ್ಟರೆ ಕೇವಲ‌ ವಿಮಾನ ಅಷ್ಟೇ ಅಲ್ಲಾ ಜಿಲ್ಲಾಧಿಕಾರಿ ಕಚೇರಿ, ಅಷ್ಟೇ ಏಕೆ ವಿಧಾನಸೌಧವನ್ನೂ ಖಾಸಗೀಕರಣ ಮಾಡಿಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.

ಎಲ್ಲಾ ಖಾಸಗೀಕರಣ ಮಾಡಿ ಬದುಕಿ ಇಲ್ಲಾ ಸಾಯಿರಿ ಅಂತಾ ಬಿಟ್ಟುಬಿಡುತ್ತಾರೆ. ರೈತರ ಭೂಮಿ ಕೂಡ ಉಳ್ಳವರ ಪಾಲಾಗುತ್ತೆ ರೈತರು ತುಂಡು ಭೂಮಿ ಕಾಯ್ದೆ ಹೋಗಿ ರೈತರೇ ಕೂಲಿ ಕಾರ್ಮಿಕರಾಗುತ್ತಾರೆ. ಮೊದಲಿದ್ದಂತೆ ಜೀತಪದ್ದತಿ ಜಾರಿಗೆ ತರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್​ಡಿಪಿಐ ಅಥವಾ ಯಾವುದೇ ಸಂಘ-ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಿ, ಅದು ಬಿಟ್ಟು ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡೋದು ಬೇಡ. ಎಲ್ಲಾ ಪಟ್ಟಭದ್ರ ಹಿತಾಸಕ್ತಿಗಳಿಗೆ ಒಂದೇ ರೀತಿ ಕ್ರಮ‌ ತಗೊಳಲಿ ಯಾರು ಬೇಡ‌ ಅಂತಾರೆ. ಈಗಾಗಲೆ ಗೋಕಾಕ್ ವರದಿ ಜಾರಿಯಲ್ಲಿದೆ ಕಾನೂನು ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಇಂಟೆಲಿಜೆನ್ಸ್ ವೈಫಲ್ಯವಾಗಿದ್ದು ಗೃಹ ಇಲಾಖೆ ಸಂಪೂರ್ಣ ಬಿದ್ದು ಹೋಗಿದೆ. ನೈತಿಕತೆ ಇದ್ದರೆ ಇದರ ಜವಾಬ್ದಾರಿ ಹೊತ್ತು ಗೃಹ ಸಚಿವರು ರಾಜೀನಾಮೆ‌ ನೀಡಬೇಕೆಂದು ಒತ್ತಾಯಿಸಿದರು.

ಅಲ್ಲದೆ ಕೂಡಲೇ ಹಾಲಿ‌ ನ್ಯಾಯಾಧೀಶರ ಕೈಯಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಕಂದಾಯ ಭೂಮಿ ಕಾಯ್ದೆಯನ್ನ ಸುಗ್ರೀವಾಜ್ಞೆ ಜಾರಿಗೆ ತಂದು ಬಡವರನ್ನ ಧಮನ ಮಾಡುತ್ತಿದ್ದಾರೆ. ಎಪಿಎಂಸಿ ಖಾಯ್ದೆ ತಿದ್ದುಪಡಿ ಕಾರ್ಮಿಕ ಕಾಯ್ದೆ ತಿದ್ದುಪಡಿ‌ ಮೂಲಕ‌ ರೈತರನ್ನ ಒಕ್ಕಲೆಬ್ಬಿಸಿ ಜೀತಪದ್ದತಿ ಜಾರಿಗೆ ತರಲು ಬಿಜೆಪಿ ಸನ್ನದ್ದವಾಗಿದೆ ಎಂದು ಲೇವಡಿ ಮಾಡಿದರು.

ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದು ರೈತರನ್ನ ಕೂಲಿ ಕಾರ್ಮಿಕರನ್ನಾಗಿ ಮಾಡುವ ಪ್ರಯತ್ನವನ್ನ ಸರ್ಕಾರ ಮಾಡುತ್ತಿದೆ ಇದರ ವಿರುದ್ಧ ದೇಶದಲ್ಲೇ ಹೋರಾಟದ ರೂಪುರೇಷೆ ಸಿದ್ದವಾಗುತ್ತಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.