ರಾಮನಗರ/ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಭಟ್ (25) ಎಂಬ ಯುವಕ ಸೋಮವಾರ ಕನಕಪುರ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಪೊಲೀಸ್ ಹಾಗೂ ಅಗ್ನಿಶಾಮಕ ದಳದ ನಿರಂತರ ಶೋಧ ಕಾರ್ಯಾಚರಣೆಯಿಂದ ಶವ ದೊರೆತಿದೆ.
ಶಿವಮೊಗ್ಗ ಮೂಲದ ಪ್ರಸನ್ನ ಕುಮಾರ ಬೆಂಗಳೂರು ನಗರದಲ್ಲಿ ಅತ್ತೆ ಮನೆಯಲ್ಲಿದ್ದರು. ಶನಿವಾರ ಮತ್ತು ಭಾನುವಾರ ಅವರಿಗೆ ರಜೆ ದಿನವಾದ್ದರಿಂದ ಸ್ನೇಹಿತರೊಂದಿಗೆ ಕನಕಪುರ ತಾಲೂಕಿನ ಅತಿದೊಡ್ಡ ಕೆರೆಯಾದ ಮಾವತ್ತೂರು ಕೆರೆ ವೀಕ್ಷಣೆಗೆ ಬಂದಿದ್ದರು.
ಕೆರೆಯಲ್ಲಿ ಈಜಲು ಹೋದ ವೇಳೆ ನೀರಲ್ಲಿ ಮುಳುಗಿ ಪ್ರಸನ್ ಭಟ್ ಮೃತಪಟ್ಟಿದ್ದಾರೆಂದು ಜೊತೆಯಲ್ಲಿದ್ದ ಸ್ನೇಹಿತರು ಗ್ರಾಮಾಂತರ ಪೊಲೀಸ್ ಠಾಣೆ ಮಾಹಿತಿ ನೀಡಿದ್ದಾರೆ. ಮೃತನ ಮಾವ ಕೌಶಿಕ್ ನೀಡಿದ ದೂರಿನ ಮೇರೆಗೆ ಕನಕಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ
ಮೃತದೇಹವನ್ನು ಶಿವಮೊಗ್ಗ ಬಿಜೆಪಿ ಕಚೇರಿ ಬಳಿ ತರಲಾಗಿತ್ತು. ಪಕ್ಷದ ಮುಖಂಡರು, ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ: ಹೊಸ ವರ್ಷಾಚರಣೆ ವೇಳೆ ಮಿಸ್ ಫೈರ್.. ಗುಂಡು ತಗುಲಿ ಯುವಕ ಬಲಿ, ಫೈರಿಂಗ್ ಮಾಡಿದ ವ್ಯಕ್ತಿಯೂ ಸಾವು