ETV Bharat / state

ರಾಜ್ಯ ಸರ್ಕಾರದ ಮೇಲಿದ್ದ ನಿರೀಕ್ಷೆಗಳೆಲ್ಲ ಸುಳ್ಳಾದವು: ಹೆಚ್.ವಿಶ್ವನಾಥ್

ಬಿಜೆಪಿ ಸರ್ಕಾರ ನಾವೆಲ್ಲ ಸೇರಿ ತಂದಿದ್ದು. ನಾವು ಹೊರಗೆ ಬರದಿದ್ದರೆ ಸರ್ಕಾರ ಎಲ್ಲಿ ಬರುತ್ತಿತ್ತು?. ಸರ್ಕಾರ ರಚನೆಯಾಗಬೇಕಾದಾಗ ನಾವು ಬೇಕಿತ್ತು. ಈಗ ಸರ್ಕಾರ ಸರಿಯಾಗಿ ಆಡಳಿತ ನಡೆಸುತ್ತಿಲ್ಲ ಎಂದು ಎಂಎಲ್​ಸಿ ಹೆಚ್.ವಿಶ್ವನಾಥ್ ಟೀಕಿಸಿದರು.

mlc-vishwanath-slams-bjp-govt
ರಾಜ್ಯ ಸರ್ಕಾರದ ಕಾರ್ಯಕ್ರಮದ ಮೇಲಿದ್ದ ನಿರೀಕ್ಷೆಗಳೆಲ್ಲ ಸುಳ್ಳಾದವು : ಹೆಚ್.ವಿಶ್ವನಾಥ್
author img

By

Published : Dec 13, 2022, 9:58 PM IST

Updated : Dec 13, 2022, 10:57 PM IST

ರಾಜ್ಯ ಸರ್ಕಾರದ ಕಾರ್ಯಕ್ರಮದ ಮೇಲಿದ್ದ ನಿರೀಕ್ಷೆಗಳೆಲ್ಲ ಸುಳ್ಳಾದವು : ಹೆಚ್.ವಿಶ್ವನಾಥ್

ರಾಮನಗರ: ಸಚಿವ ಸ್ಥಾನ ಕೊಟ್ಟರೂ ನನಗೆ ಬೇಡ. ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಸರ್ಕಾರದಿಂದ ಒಳ್ಳೆಯ ಕಾರ್ಯಕ್ರಮಗಳನ್ನು ನಿರೀಕ್ಷೆ ಮಾಡಿದ್ದೆವು. ಅದೆಲ್ಲವೂ ಸುಳ್ಳಾಯಿತು ಎಂದು ಎಂಎಲ್​ಸಿ ಹೆಚ್.ವಿಶ್ವನಾಥ್ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನಾವೆಲ್ಲ ಸೇರಿ ತಂದಿದ್ದು. ನಾವು ಹೊರಗೆ ಬರದಿದ್ದರೆ ಸರ್ಕಾರ ಎಲ್ಲಿ ಬರುತ್ತಿತ್ತು?. ಸರ್ಕಾರ ರಚನೆಯಾಗಬೇಕಾದಾಗ ನಾವು ಬೇಕಿತ್ತು. ಸರ್ಕಾರ ಸರಿಯಾಗಿ ಆಡಳಿತ ನಡೆಸುತ್ತಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್‌ಗೆ ರೆಬೆಲ್ಸ್ ವಾಪಸ್ಸಾಗುವ ವಿಚಾರವಾಗಿ ಮಾತನಾಡಿದ ಅವರು, ಅದು ನನಗೆ ಗೊತ್ತಿಲ್ಲ. ನಾನು ಯಾರ ಜೊತೆಯೂ ಮಾತನಾಡಿಲ್ಲ‌. ಮುಂದಿನ ದಿನಗಳಲ್ಲಿ ಏನಾಗುತ್ತದೆ ನೋಡೋಣ ಎಂದು ಪರೋಕ್ಷವಾಗಿ ಬಿಜೆಪಿ ತೊರೆಯುವ ಮುನ್ಸೂಚನೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಬಗ್ಗೆ, ಇದರಲ್ಲಿ ಯಾವುದೇ ವಿಶೇಷ ಇಲ್ಲ‌. ನಾನು ಶಿವಕುಮಾರ್ 40 ವರ್ಷದ ಸ್ನೇಹಿತರು. ಸಿದ್ದರಾಮಯ್ಯ ನಾನು ಒಟ್ಟಿಗೆ ಕಾನೂನು ಓದಿದವರು. ಖರ್ಗೆಯವರ ಜೊತೆಗೆ ನಾನು ಕೆಲಸ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಭೇಟಿ ಮಾಡಿ ಮಾತನಾಡಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಸೇರುವ ವಿಚಾರವಾಗಿ, ಯಾರು ಎಲ್ಲಿಗೆ ಹೋಗ್ತಾರೋ ಗೊತ್ತಿಲ್ಲ, ನಾನು ಯಾವ ನಿರ್ಧಾರವನ್ನು ಮಾಡಿಲ್ಲ. ಯಾವುದೇ ಪಕ್ಷದಲ್ಲಿ ಗೌರವ ಬಯಸುತ್ತೇನೆ ಎಂದರು.

ಸರ್ಕಾರ ಜನರ ಸರ್ಕಾರವಾಗಿ ಉಳಿಯಲಿಲ್ಲ: ನಾವು ಬಯಸಿದ ಕಾರ್ಯಕ್ರಮಗಳು ಬಿಜೆಪಿಯಲ್ಲಿ ಆಗಲಿಲ್ಲ. ಸರ್ಕಾರ ಜನರ ಸರ್ಕಾರವಾಗಿ ಉಳಿಯಲಿಲ್ಲ. ಯಾವುದೋ ಮಸೀದಿಗೆ ನುಗ್ಗುವುದು, ದೇವಸ್ಥಾನಕ್ಕೆ ಮುಸ್ಲಿಮರು ಬರಬಾರದು ಅನ್ನೋದು ಸರಿಯಲ್ಲ. ಧರ್ಮಾತೀತ, ಜಾತ್ಯಾತೀತ ರಾಷ್ಟ್ರ ಇದು. ಹಾಗಾದರೆ ದೇಶದಲ್ಲಿ 30 ಕೋಟಿ ಮುಸ್ಲಿಮರಿದ್ದಾರೆ, ಆಚೆ ಕಳುಹಿಸುತ್ತೀರಾ ಎಂದು ಪ್ರಶ್ನಿಸಿದರು. ಇವೆಲ್ಲವೂ ಮನಸ್ಸಿಗೆ ಬೇಜಾರಾಗುತ್ತದೆ. ಯಾವುದನ್ನು ಮಾಡಬೇಕು ಅದನ್ನು ಮಾಡೋಣ ಎಂದು ಹೇಳಿದರು.

ಮೀಸಲಾತಿ ವಿಚಾರವಾಗಿ ಸರ್ಕಾರ ಸರಿಯಾದ ಹೆಜ್ಜೆ ಹಾಕಲಿಲ್ಲ. ಚುನಾವಣೆ ಹತ್ತಿರ ಇದೆ ಎಂದು ಹೇಳಿದರೆ ಹೇಗೆ? ಎಂದು ಬಿಜೆಪಿ ಸರ್ಕಾರದ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಡಿಕೆಶಿ ಭೇಟಿಯಾದ ಹೆಚ್ ವಿಶ್ವನಾಥ್; ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಜ್ಜು?

Last Updated : Dec 13, 2022, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.