ರಾಮನಗರ: ಆಕಸ್ಮಿಕವಾಗಿ ಪೈಪ್ಲೈನ್ನಲ್ಲಿ ಸಿಲುಕಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದರು. ರಾಮನಗರದ ಕೊಂಕಣಿದೊಡ್ಡಿ ಗ್ರಾಮದ ರಾಜಣ್ಣ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಪೈಪ್ಲೈನ್ ಅಳವಡಿಸಲು ತೆರಳಿದ್ದ ವೇಳೆ ಪೈಪ್‌ನಲ್ಲಿ ಇವರು ಸಿಲುಕಿದ್ದರು. ಬಳಿಕ ಹೊರಬರಲಾಗದೆ ಒದ್ದಾಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಅಧಿಕ ಹೊತ್ತು ಪೈಪ್ಲೈನ್ನಲ್ಲಿ ಸಿಲುಕಿ ಯಮಯಾತನೆ ಅನುಭವಿಸಿದ್ದರು. ವಿಷಯ ತಿಳಿದು ಸಕಾಲಕ್ಕೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ನಿರಂತರ ಕಾರ್ಯಚರಣೆ ನಡೆಸಿ ರಾಜಣ್ಣನನ್ನು ಹೊರತೆಗೆದರು.
ಅಗ್ನಿಶಾಮಕ ಸಿಬ್ಬಂದಿಗೆ ಡಿಸಿಎಂ ಅಭಿನಂದನೆ
ರಕ್ಷಣೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ರಾಮನಗರ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸದ್ಯದಲ್ಲೇ ನಾನು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದೇನೆ. ಆ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಸಿಬ್ಬಂದಿಯನ್ನೂ ಗೌರವಿಸಲಾಗುವುದು ಹಾಗೂ ಅವರಿಗೆ ಪ್ರಶಂಸನಾ ಪತ್ರ ನೀಡಲಾಗುವುದು ಎಂದಿದ್ದಾರೆ.
-
ರಾಮನಗರ ಬೈಪಾಸ್ ರಸ್ತೆ ಸಮೀಪದ ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಣೆ ಮಾಡಿದ ರಾಮನಗರ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಭಿನಂದನೆಗಳು.
— Dr. Ashwathnarayan C. N. (@drashwathcn) July 4, 2021 " class="align-text-top noRightClick twitterSection" data="
ಸದ್ಯದಲ್ಲೇ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದೇನೆ. ಆ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಸಿಬ್ಬಂದಿಯನ್ನೂ ಗೌರವಿಸಲಾಗುವುದು.
">ರಾಮನಗರ ಬೈಪಾಸ್ ರಸ್ತೆ ಸಮೀಪದ ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಣೆ ಮಾಡಿದ ರಾಮನಗರ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಭಿನಂದನೆಗಳು.
— Dr. Ashwathnarayan C. N. (@drashwathcn) July 4, 2021
ಸದ್ಯದಲ್ಲೇ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದೇನೆ. ಆ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಸಿಬ್ಬಂದಿಯನ್ನೂ ಗೌರವಿಸಲಾಗುವುದು.ರಾಮನಗರ ಬೈಪಾಸ್ ರಸ್ತೆ ಸಮೀಪದ ಪೈಪ್‌ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಣೆ ಮಾಡಿದ ರಾಮನಗರ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಭಿನಂದನೆಗಳು.
— Dr. Ashwathnarayan C. N. (@drashwathcn) July 4, 2021
ಸದ್ಯದಲ್ಲೇ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದೇನೆ. ಆ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಸಿಬ್ಬಂದಿಯನ್ನೂ ಗೌರವಿಸಲಾಗುವುದು.
ಪೈಪ್‌ನಲ್ಲಿ ಸಿಲುಕಿದ್ದ ವ್ಯಕ್ತಿ ಯನ್ನು ರಕ್ಷಿಸಲು ಅತ್ಯಂತ ನಾಜೂಕು ಮತ್ತು ಎಚ್ಚರಿಕೆಯಿಂದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದೆ. ಅತ್ಯಂತ ವೃತ್ತಿಪರವಾದ ಕಾರ್ಯಾಚರಣೆ ಇದು. ಒಂದು ಅಮೂಲ್ಯ ಜೀವ ರಕ್ಷಿಸಿದ ಎಲ್ಲ ಸಿಬ್ಬಂದಿಗೆ ನನ್ನ ಅಭಿನಂದನೆಗಳು ಎಂದಿದ್ದಾರೆ.