ರಾಮನಗರ : ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಜಿಲ್ಲೆಯ ಅಧಿಕಾರಿಗಳ ಮೇಜರ್ ಸರ್ಜರಿಗೆ ಮುಂದಾಗಿದ್ದಾರೆ. ಉಪಚುನಾವಣೆ ಫಲಿತಾಂಶ ನಂತರ ಅಧಿಕಾರಿ ವರ್ಗದವರನ್ನು ಸರ್ಜರಿ ಮಾಡಲು ತೀರ್ಮಾನಿಸಿದ್ದಾರೆ. ಅಲ್ಲದೇ ಸಂಸದ ಡಿ.ಕೆ.ಸುರೇಶ್ ಅವರಿಗೂ ಕೂಡ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವ ಸ್ಥಳ ಪರಿಶೀಲನೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಆಗಮಿಸಿದ್ದರು. ಈ ವೇಳೆ ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ವಾರ್ನ್ ಮಾಡಿದ್ದ ವಿಚಾರವಾಗಿ ಪ್ರತಿಕ್ರಿಯಿಸಿ ಉಪ ಚುನಾವಣೆ ಫಲಿತಾಂಶದ ನಂತರ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳಿಗೆ ಮೇಜರ್ ಸರ್ಜರಿ ಮಾಡಲು ಮುಂದಾಗಿರುವ ಸುಳಿವು ನೀಡಿದರು.
ನಾನು ಜಿಲ್ಲೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. 9ರ ನಂತರ ಎಲ್ಲವನ್ನೂ ಕ್ಲೀನ್ ಮಾಡಬೇಕಿದೆ. ಸಂಸದ ಡಿ.ಕೆ.ಸುರೇಶ್ ತಮಗೆ ಬೇಕಿದ್ದ ಅಧಿಕಾರಿಗಳನ್ನು ಜಿಲ್ಲೆಗೆ ಹಾಕಿಸಿಕೊಂಡಿದ್ದರು. ಆದ್ರೆ ಇದೀಗ ಅವರೆ ಅಧಿಕಾರಿಗಳ ಮೇಲೆ ಬೈದಾಡುತ್ತಿದ್ದಾರೆ ನಾನು ಎಲ್ಲವನ್ನ ನೋಡುತಿದ್ದೇನೆ ಎನ್ನುವ ಮೂಲಕ ಸುರೇಶ್ಗೆ ಟಾಂಗ್ ನೀಡಿದ್ರು.
ಇದೇ ವೇಳೆ ಉಪ ಚುನಾವಣೆಯಲ್ಲಿ ಕನಿಷ್ಠ 12 ಸ್ಥಾನಗಳನ್ನ ಗೆಲ್ಲುತ್ತೇವೆ. ಹೆಚ್ಚು ಕಡಿಮೆ 15 ಸ್ಥಾನಗಳನ್ನ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನಮಗಿದೆ. 9 ರಂದು ಯಾರಿಗೆ ನಾಂದಿ ಯಾರಿಗೆ ಬಹುಮಾನ ಇರುತ್ತೆ ಅಂತಾ ನೋಡಿ ನಾವು ಗೆಲ್ಲೋದು ನಿಶ್ಚಿತ ಎಂದು ಭವಿಷ್ಯ ನುಡಿದ್ರು.
ನಮ್ಮ ವಿರೋಧ ಪಕ್ಷದವರು ನಾವು ಗೆಲ್ಲುತ್ತೇವೆ ಎಂದು ಹೇಳಿ ಕೊಳ್ಳುತ್ತಿದ್ದಾರೆ, ಇದಕ್ಕೆ ಕಾದು ನೋಡಿ ಗೊತ್ತಾಗುತ್ತೆ ಎಂದ ಅವರು, ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರ ವಿರುದ್ಧ ಕೂಡ ಹರಿಹಾಯ್ದರು. ಶರತ್ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದಿತ್ತು. ಪಕ್ಷದಲ್ಲಿ ಅಧಿಕಾರಕ್ಕಿಂತ ಪಕ್ಷವನ್ನ ಪ್ರೀತಿಸಬೇಕು. ಒಂದು ಪಕ್ಷದಲ್ಲಿ ಪಡೆದುಕೊಳ್ಳಲು, ತ್ಯಾಗ ಮಾಡಲು ಸಿದ್ದರಾಗಿರಬೇಕು. ನಾನು ಎನ್ನುವುದು ಸಾಮಾಜದಲ್ಲಿ ಜಾಸ್ತಿ ಸಮಯ ಇರುವುದಿಲ್ಲ. ಪಕ್ಷ ನಿರ್ಧಾರ ಮಾಡಿದ್ದನ್ನು ಸಹಕಾರ ಕೊಟ್ಟು ಕೆಲಸ ಮಾಡಬೇಕಿತ್ತು ಆದ್ರೆ ಶರತ್ ತಪ್ಪು ಮಾಡಿದ್ರು ನಾನು ಶರತ್ ಗೆ ಸಹೋದರನಾಗಿ ಈ ಮಾತುಗಳನ್ನ ಹೇಳುತ್ತಿದ್ದೇನೆ ಎಂದು ಶರತ್ ಬಚ್ಚೇಗೌಡಗೆ ಕಿವಿ ಮಾತು ಹೇಳಿದ್ರು.