ETV Bharat / state

ಜೆಡಿಎಸ್​ ಕಾರ್ಯಕರ್ತನಿಂದ್ಲೇ ಹೆಚ್​ಡಿಕೆ,ಅನಿತಾ ಕುಮಾರಸ್ವಾಮಿಗೆ ಪಾಠ! ವಿಡಿಯೋ ವೈರಲ್​​ - ETV Bharath

ಪಕ್ಕದ ಕ್ಷೇತ್ರಗಳ ಜನಪ್ರತಿನಿಧಿಗಳನ್ನು ನೋಡಿ ಕಲಿಯಿರಿ ಎಂದು ಆಕ್ರೋಶಭರಿತವಾಗಿ ಮುಖ್ಯಮಂತ್ರಿ ಹೆಚ್​ಡಿಕೆ ಹಾಗೂ ಶಾಸಕಿ‌ ಅನಿತಾ ಕುಮಾರಸ್ವಾಮಿ ಅವರಿಗೆ ಕುಟುಕಿದ್ದು ಜನಗಳಿಂದ ಆಯ್ಕೆಯಾಗಿದ್ದೀರಿ, ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ವೈರಲ್​ ಆದ ವಿಡಿಯೋ
author img

By

Published : Jun 15, 2019, 12:00 AM IST

ರಾಮನಗರ: ಜೆಡಿಎಸ್ ಕಾರ್ಯಕರ್ತ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾಕುಮಾರಸ್ವಾಮಿ ಅವರಿಗೆ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಿವಿಮಾತು ಹೇಳಿರುವ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ‌ ವೈರಲ್‌ ಆಗಿದೆ.

ರಾಮನಗರ ಜಿಲ್ಲೆಯಲ್ಲಿ ಯಾವ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ವಿಡಿಯೋ ಮಾಡಿರುವ ಪಕ್ಷದ ಕಾರ್ಯಕರ್ತ ಸುರೇಶ್ ತನ್ನ ಮನದ ಇಂಗಿತವನ್ನು ಹೊರ ಹಾಕಿದ್ದಾರೆ.

ವೈರಲ್​ ಆದ ವಿಡಿಯೋ

ವಿಡಿಯೋದಲ್ಲಿ ಏನಿದೆ:

ತಾಲೂಕು ಕಚೇರಿ ಸೇರಿದಂತೆ ಯಾವ ಇಲಾಖೆಗಳಲ್ಲೂ ಕೆಲಸ ನಡೆಯುತ್ತಿಲ್ಲ. ಕಚೇರಿಯಲ್ಲಿ ನೂರಾರು ಸಮಸ್ಯೆಗಳಿವೆ. ಸಾರ್ವಜನಿಕರು ನಿತ್ಯ ತಮ್ಮ ಕೆಲಸಗಳಿಗಾಗಿ ಅಲೆಯುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಈ ಕೂಡಲೇ ಆಲಿಸಿ, ಅವುಗಳಿಗೆ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ.

ಕಾಣದ ಕೈಗಳಿಂದ ರಾಮನಗರ‌ ನರಳುತ್ತಿದೆ ಎಂದು ರಾಮನಗರದ ರಾಯರದೊಡ್ಡಿ ನಿವಾಸಿ ಸುರೇಶ್ ಎಂಬುವರು ಫೇಸ್​ಬುಕ್​ ಲೈವ್​​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಕದ ಕ್ಷೇತ್ರಗಳ ಜನಪ್ರತಿನಿಧಿಗಳನ್ನು ನೋಡಿ ಕಲಿಯಿರಿ ಎಂದು ಕುಮಾರಸ್ವಾಮಿ ಹಾಗೂ ‌ಅನಿತಾ ಕುಮಾರಸ್ವಾಮಿ ಅವರಿಗೆ ಕುಟುಕಿರುವ ಅವರು, ಜನಗಳಿಂದ ಆಯ್ಕೆಯಾಗಿದ್ದೀರಿ, ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

Intro:Kn_rmn_03_14_jds_follower_video_7204219Body:ರಾಮನಗರ : ಜೆಡಿಎಸ್ ಕಾರ್ಯಕರ್ತನಿಂದಲೇ ಸಿಎಂ ಹೆಚ್ಡಿಕೆ ಹಾಗೂ ಶಾಸಕಿ ಅನಿತಾಕುಮಾರಸ್ವಾಮಿ ಗೆ ಕಿವಿಮಾತು ಹೇಳಿರುವ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ‌ ವೈರಲ್‌ ಆಗಿದೆ.
ರಾಮನಗರ ಜಿಲ್ಲೆಯಲ್ಲಿ ಯಾವ ಕೆಲಸ ಕಾರ್ಯಗಳು ನಡೆಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿರುವ ಜೆಡಿಎಸ್ ಕಾರ್ಯಕರ್ತ ಸುರೇಶ್ ವಿಡಿಯೋ ಮಾಡಿ ತನ್ನ ಮನದ ಇಂಗಿತ‌ಹೇಳುವ ಮೂಲಕ‌ಸಾರ್ವಜನಿಕರ ಸಮಸ್ಯೆ ಬಗ್ಗೆ ಗಮನ‌ಸೆಳೆಯುವಬಪ್ರಯತ್ನ‌ಮಾಡಿದ್ದಾರೆ. ವಿಡಿಯೋದಲ್ಲಿ ತಾಲೂಕು ಕಚೇರಿ ಸೇರಿದಂತೆ ಯಾವ ಇಲಾಖೆಗಳಲ್ಲೂ ಕೆಲಸ ನಡೆಯುತ್ತಿಲ್ಲವೆಂದು ನೋವಿನ ಮಾತುಗಳ ಜೊತೆಗೆ ಕೇವಲ‌ ಕೆಲವೇ‌ಕೆಲವರ ಕೈಯಲ್ಲಿ ರಾಮನಗರ‌ನರಳುತ್ತಿದೆ ಎನ್ನುವ ಮಾತುಗಳು ರಾಮನಗರದ ರಾಯರದೊಡ್ಡಿ ಗ್ರಾಮದ ನಿವಾಸಿ ಸುರೇಶ್ ಎಂಬುವವರಿಂದ ಫೇಸ್ ಬುಕ್ ಲೈವ್ನಲ್ಲಿಯೂ ಹರಿದಾಡುತ್ತಿದೆ.

ಇದೇ ವೇಳೆ ಪಕ್ಕದ ಕ್ಷೇತ್ರಗಳ ಜನಪ್ರತಿನಿಧಿಗಳನ್ನ ನೋಡಿ ಕಲಿಯಿರಿ ಎಂದು ಆಕ್ರೋಶವಾಗಿಯೇ ಮುಖ್ಯಮಂತ್ರಿ ಹೆಚ್ಡಿಕೆ ಹಾಗೂ ಶಾಸಕಿ‌ಅನಿತಾ ಕುಮಾರಸ್ವಾಮಿ ಅವರಿಗೆ ಕುಟುಕಿದ್ದು ಜನಗಳಿಂದ ಆಯ್ಕೆಯಾಗಿದ್ದೀರಿ, ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
Conclusion:Kn_rmn_03_14_jds_follower_video_7204219
ETV Bharat Logo

Copyright © 2024 Ushodaya Enterprises Pvt. Ltd., All Rights Reserved.