ರಾಮನಗರ: ಜಿಲ್ಲೆಯ ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ 60 ಅಡಿ ಎತ್ತರದ ವಿಶ್ವದ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು.
ದೇಗುಲದ ಇತಿಹಾಸ:
ಚನ್ನಪಟ್ಟಣ ತಾಲೂಕಿನ ಧಾರ್ಮಿಕ ಕ್ಷೇತ್ರವಾದ ಗೌಡಗೆರೆ ಗ್ರಾಮದಲ್ಲಿ ಈ ಬೃಹತ್ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ಈ ಮೂಲಕ ಬೊಂಬೆಗಳ ನಿರ್ಮಾಣ ಕಾರ್ಯದಲ್ಲಿ ಈಗಾಗಲೇ ವಿಶ್ವಪ್ರಸಿದ್ಧಿ ಪಡೆದಿರುವ ಬೊಂಬೆನಗರಿಗೆ ಮತ್ತೊಂದು ಗರಿ ಮೂಡಿದೆ. ಇದು ದೇಶದಲ್ಲಿಯೇ ಮೊದಲ 18 ಭುಜದ ಪಂಚಲೋಹ ವಿಗ್ರಹವೂ ಹೌದು. ಈ ದೇಗುಲಕ್ಕೆ ರಾಜ್ಯ ಮಾತ್ರವಲ್ಲದೆ ಹೊರ ದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ.
ಮುಸ್ಲಿಂ ಕಲಾವಿದರಿಂದ ರಚಿತವಾದ ವಿಗ್ರಹ:
35 ಸಾವಿರ ಕೆ.ಜಿ ತೂಕದ ಚಿನ್ನ, ಬೆಳ್ಳಿ, ಹಿತ್ತಾಳೆ, ಕಂಚು ಹಾಗು ತಾಮ್ರ ಸೇರಿದಂತೆ ಪಂಚಲೋಹಗಳಿಂದ ತಯಾರಾಗಿರುವ ವಿಗ್ರಹವನ್ನು ಮುಸ್ಲಿಂ ಸಮುದಾಯದ 20 ಜನರು ಕಳೆದ ಮೂರು ವರ್ಷಗಳಲ್ಲಿ ತಯಾರು ಮಾಡಿದ್ದಾರೆ. ವಿಗ್ರಹ ತಯಾರಿಗೆ ಸುಮಾರು 3 ವರ್ಷಗಳ ಕಾಲ ಸಮಯ ಹಿಡಿದಿದೆ. 18 ಭುಜಗಳುಳ್ಳ ಈ ಮೂರ್ತಿ ನೋಡಲು ಅದ್ಭುತವಾಗಿದೆ.
ಇದನ್ನೂ ಓದಿ: ಸಂಪುಟ ದರ್ಜೆ ಸ್ಥಾನಮಾನ ಹಿಂಪಡೆಯುವಂತೆ ಬೊಮ್ಮಾಯಿಗೆ ಬಿಎಸ್ವೈ ಪತ್ರ
ಗೌಡಗೆರೆ ದೇವಾಲಯಕ್ಕೆ ನೂರಾರು ವರ್ಷದ ಇತಿಹಾಸವೂ ಇದೆ. ಅದರಲ್ಲೂ ಮಕ್ಕಳಿಲ್ಲದವರು ಇಲ್ಲಿ ಬಂದು ತಾಯಿಯ ದರ್ಶನ ಪಡೆದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಜನರಲ್ಲಿದೆ.