ETV Bharat / state

ಹಣ್ಣು ತಿಂದವರ ಬಿಟ್ಟು ಸಿಪ್ಪೆ ತಿಂದವರ ತೋರಿಸುವ ಪ್ರಯತ್ನ: ಬಿಜೆಪಿ ವಿರುದ್ಧ ಡಿಕೆ‌ಶಿ ಕಿಡಿ - ನೂತನ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮ

ವೋಟರ್ ಐಡಿ ಹಗರಣ. ಬಿಜೆಪಿಯವರು ಹಣ್ಣು ತಿಂದವರನ್ನು ಬಿಟ್ಟು ಸಿಪ್ಪೆ ತಿಂದವರನ್ನು ಹಿಡಿದು ತೋರಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

KPCC President DK Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
author img

By

Published : Nov 22, 2022, 11:22 AM IST

ರಾಮನಗರ: ವೋಟರ್ ಐಡಿ ಅಕ್ರಮದಲ್ಲಿ ಒಬ್ಬ ಕಿಂಗ್‌ಪಿನ್ ಬಂಧಿಸಿದರೆ ಸಾಲದು. ಅಕ್ರಮದ ಹಿಂದೆ ಯಾರಿದ್ದಾರೆ, ಯಾವ ರಾಜಕಾರಣಿಗಳು ಇದ್ದಾರೆ ಎಂಬುದು ಬಯಲಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.

ವೋಟರ್‌ ಐಡಿ ಅಕ್ರಮ: ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ

ಕನಕಪುರ ತಾಲೂಕಿನ ಬಿಳಿದಾಳೆ ಗ್ರಾಮದ ಜಡೆಲಿಂಗೇಶ್ವರ ಸ್ವಾಮಿ ದೇಗುಲದ ನೂತನ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ವೋಟರ್ ಐಡಿ ಹಗರಣದಲ್ಲಿ ಬಿಜೆಪಿಯವರು ಹಣ್ಣು ತಿಂದವರನ್ನು ಬಿಟ್ಟು ಸಿಪ್ಪೆ ತಿಂದವರನ್ನು ಹಿಡಿದು ತೋರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಖಾಸಗಿಯಾಗಿ ಯಾರಿಗೂ ಬಿಎಲ್​​ಒ ಆಗಿ ನೇಮಕ ಮಾಡಲು ಆಗುವುದಿಲ್ಲ. ಈ ರೀತಿ ಮಾಡಲು ಒತ್ತಡ ಹೇರಿದವರು ಯಾರು?, ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಇದರ ಹಿಂದೆ ಕೆಲವು ಸಚಿವರು ಇದ್ದು ಅವರ ಬಂಧನ ಆಗಬೇಕು. ಚುನಾವಣಾ ಅಧಿಕಾರಿಗೆ ಆದೇಶ ಕೊಟ್ಟವರು ಯಾರು ಎಂದು ಗೊತ್ತಾಗಬೇಕು ಎಂದರು.

ಇದನ್ನೂ ಓದಿ: ಮತದಾರ ಮಾಹಿತಿ ಹಗರಣ: ಕೇಂದ್ರ ಚು.ಆಯೋಗಕ್ಕೆ ದೂರು ನೀಡಲಿರುವ ಕಾಂಗ್ರೆಸ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.