ರಾಮನಗರ: ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರಿರುವ ಸಿಎಂ ಇಬ್ರಾಹಿಂ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವುದಾಗಿ ಪರೋಕ್ಷವಾಗಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ರೇಷ್ಮೆನಗರಿ ರಾಮನಗರದಲ್ಲಿ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಇದೇ ತಿಂಗಳ 17ಕ್ಕೆ ಇಬ್ರಾಹಿಂರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷ ಸಂಘಟನೆಯ ಉನ್ನತ ಸ್ಥಾನಮಾನ ನೀಡಲಾಗುವುದು ಎಂದರು.
ಈಶ್ವರಪ್ಪ ಪ್ರಕರಣ: ನೈತಿಕತೆ ಇದ್ದರೆ ಈಶ್ವರಪ್ಪ ಒಳ್ಳೆಯ ತೀರ್ಮಾನಕ್ಕೆ ಬರಲಿ, ಬಿಜೆಪಿಯಲ್ಲಿ ಒಳಜಗಳ ನಡೆಯುತ್ತಿದೆ. ಈಶ್ವರಪ್ಪನವರೇ ಕಾಂಗ್ರೆಸ್ಗೆ ಆಹಾರ ಆಗಬೇಡಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ ಎಂದು ಜೆಡಿಎಸ್ ನಾಯಕರು ಆಗ್ರಹಿಸಿದರು.
ಇದನ್ನೂ ಓದಿ: ಆರೋಪ ಮಾಡಿದ್ಕೂಡಲೇ ಸಾಬೀತಾದಂತಲ್ಲ.. ಯಾರ್ ಕೊಟ್ಟಿದ್ದು, ಯಾರ್ ತೆಗೆದ್ಕೊಂಡಿದ್ದೆಲ್ಲ ಸಾಬೀತಾಗ್ಬೇಕು, ಆಮೇಲೆ ಕ್ರಮ.. ಆರಗ