ETV Bharat / state

ಲಾಕ್​ ಆಗಿದ್ದ ಕೈದಿಗಳಿಗಿಲ್ಲ ಬಿಡುಗಡೆ ಭಾಗ್ಯ... ಇದು ರಾಮನಗರ ಜೈಲಿನ ಕಹಾನಿ! - ರಾಮನಗರ

ಕೋವಿಡ್ ವೇಳೆ ಹಲವು ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತ್ತಿದ್ರೂ, ಜೈಲಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಕೊರೊನಾ‌ ಕಟ್ಟುನಿಟ್ಟಿನ‌ ನಿಯಮಗಳ ಸಡಿಲಿಕೆ ಮಾಡುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ ಕೂಡ ಬೆಂಗಳೂರಿಗೆ ಸ್ಥಳಾಂತರಗೊಂಡಿರುವ ಅನೇಕ ಕೈದಿಗಳು ವಾಪಸ್​ ಬಂದಿಲ್ಲ.

Jails
ರಾಮನಗರ ಜೈಲಿ
author img

By

Published : Aug 26, 2020, 10:39 PM IST

ರಾಮನಗರ: ಕೋವಿಡ್-19 ಜಗತ್ತನ್ನೇ ಹೈರಾಣಾಗಿಸಿದೆ.‌ ಸಮಾಜದ ಎಲ್ಲಾ ವರ್ಗಗಳೂ ಕೂಡ ಕೊರೊನಾ ಸಂಕಷ್ಠ ಎದುರಿಸಿದ್ದಲ್ಲದೆ ಲಾಕ್​ಡೌನ್, ಸೀಲ್​ಡೌನ್​ನಂತಹ ಗಂಭೀರ ಪರಿಸ್ಥಿತಿಗಳನ್ನ ಎದುರಿಸಿದೆ. ಇದಕ್ಕೆ ಕಾರಾಗೃಹಗಳು ಹೊರತಾಗಿಲ್ಲ ಎಂದರೂ ತಪ್ಪಲ್ಲ.

ರಾಮನಗರ ಜೈಲಿನಲ್ಲೂ ಪಾಲನೆಯಾಗ್ತಿದೆ ಕೋವಿಡ್​ ನಿಯಮ

ವಿಶೇಷವಾಗಿ ರಾಮನಗರ ಜಿಲ್ಲಾ ಕಾರಾಗೃಹ ಹಲವು ಅವಾಂತರಗಳಿಗೆ ಕಾರಣವಾಗಿದ್ದಂತೂ ನಿಜ. ಪಾದರಾಯನಪುರ ಗಲಾಟೆ ಆರೋಪಿಗಳನ್ನ ಕರೆತಂದಿದ್ದೇ ತಡ ಹಸಿರು ವಲಯದಲ್ಲಿದ್ದ ರಾಮನಗರಕ್ಕೆ ಆತಂಕ ಉಂಟಾಗಿತ್ತು. ಇಲ್ಲಿಗೆ ಕರೆತರುವ ಮುನ್ನ ಜೈಲಿನಲ್ಲಿದ್ದ ಸುಮರು 174 ಆರೋಪಿಗಳನ್ನ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ನಂತರ ಪಾದರಾಯನಪುರ ಆರೋಪಿಗಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಆತಂಕ ಹುಟ್ಟಿಸಿತ್ತು. ಆ ಬಳಿಕ ಜೈಲು ಸಿಬ್ಬಂದಿಗಳಲ್ಲಿಯೂ ಕೂಡ ಪಾಸಿಟಿವ್ ಕಾಣಿಸಿಕೊಂಡು ಸುಮಾರು ಒಂದೂವರೆ ತಿಂಗಳು ಸೀಲ್​ಡೌನ್​ಗೆ ರಾಮನಗರ ಜಿಲ್ಲಾ ಕಾರಾಗೃಹ ಒಳಪಟ್ಟಿತ್ತು.

ಕೋವಿಡ್ ವೇಳೆ ಹಲವು ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತಿದ್ದರೂ, ರಾಮನಗರದ ಎಲ್ಲ ಕೈದಿಗಳನ್ನ ಬೆಂಗಳೂರಿಗೆ ವರ್ಗಾಯಿಸಿದ್ದರಿಂದ ನಮ್ಮ ಪರಿಮಿತಿಯಲ್ಲಿರಲಿಲ್ಲ ಅಂತಾರೆ ಜೈಲಾಧಿಕಾರಿಗಳು. ಇದೀಗ ಕೊರೊನಾ‌ ಕಟ್ಟುನಿಟ್ಟಿನ‌ ನಿಯಮಗಳ ಸಡಿಲಿಕೆ ಮಾಡುವ ಮೂಲಕ ಪರಿಸ್ಥಿತಿ ಆತಂಕಗಳು‌ ತಹಬದಿಗೆ ಬಂದಿದ್ದರೂ ಕೂಡ ಬೆಂಗಳೂರಿಗೆ ಸ್ಥಳಾಂತರ ಮಾಡಿದ್ದ ಕೈದಿಗಳನ್ನ ಇಲ್ಲಿಗೆ ಕರೆತಂದಿಲ್ಲ. ಆದರೆ ಕಳೆದ ಎರಡು-ಮೂರು ತಿಂಗಳಿನಿಂದ ಸುಮಾರು 44 ಮಂದಿ ವಿಚಾರಣಾಧೀನ ಕೈದಿಗಳು ಅಷ್ಟೇ ಇದೀಗ ಜೈಲಿನಲ್ಲಿದ್ದಾರೆ.

ಬೆಂಗಳೂರಿನಿಂದ 25 ಮಂದಿಯನ್ನ ನಿನ್ನೆಯಷ್ಟೇ ಕರೆ ತಂದಿದ್ದು, ಅವರನ್ನ ಪ್ರತ್ಯೇಕ ಸೆಲ್​ನಲ್ಲಿ ಇಡಲಾಗಿದೆ. ಇದೀಗ ಜೈಲಿನಲ್ಲಿರುವ ಕೈದಿಗಳಿಗೆ ಬಿಡುಗಡೆ ಅಥವಾ ಪೆರೋಲ್ ಅವಶ್ಯಕತೆ ಬಿದ್ದಿಲ್ಲ ಅಂತಾರೆ ಜೈಲು ಅಧಿಕಾರಿ. ಜೊತೆಗೆ ಇದೀಗ ಜೈಲಿನಲ್ಲಿರುವವರಿಗೆ ಅವರ ಕುಟುಂಬಸ್ಥರು ಅಥವಾ ಯಾರ ಭೇಟಿಗೂ ಅವಕಾಶ ಇಲ್ಲ. ಅಲ್ಲದೆ ಜೈಲಿನ ಒಳಗೆ ಅಧಿಕಾರಿ ,ಸಿಬ್ಬಂದಿ ಯಾರು ಹೋಗಬೇಕಾದ್ರೂ ಸ್ಯಾನಿಟೈಸರ್ ಅತ್ಯಗತ್ಯ, ಮಾಸ್ಕ್ ಕಡ್ಡಾಯ ಎನ್ನುತ್ತಾರೆ. ಜೈಲಿನ‌ ಮುಂಭಾಗ ಅದಕ್ಕಾಗಿಯೇ ಸ್ಯಾನಿಟೈಸರ್ ಸೆಂಟರ್ ತೆರೆದಿದ್ದಾರೆ.

ಸದ್ಯ ರಾಮನಗರ ಜೈಲಿನಲ್ಲಿರುವ ಕೈದಿಗಳ ಆರೋಗ್ಯದ ದೃಷ್ಟಿಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಜೈಲರ್ ಹೇಳಿಕೆ ನೀಡಲು ನಿರಾಕರಿಸಿ ಮಾಹಿತಿ‌ ನೀಡಿದರು.

ಇದೀಗ ಕೋರ್ಟ್ ಕೊರೊನಾ‌ ಹಿನ್ನೆಲೆ ರೆಗ್ಯುಲರ್ ಆಗಿ ಆರೋಪಿಗಳನ್ನ ಹಾಜರುಪಡಿಸುವಂತೆ ಕೇಳಿಲ್ಲದ ಕಾರಣ ಓಡಾಡುವ ಪ್ರಮೇಯ ಬಂದಿಲ್ಲ. ಜೈಲಿನಲ್ಲಿ ಕೂಡ ಸಾಮಾನ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧಾರಣೆ ಜೊತೆಗೆ ಸ್ಯಾನಿಟೈಸರ್ ಸಿಂಪಡಣೆ ನಡೆಸಲಾಗುತ್ತಿದೆ ಎಂದು ಜೈಲು ಅಧಿಕಾರಿ ಸೂಪರಿಂಟೆಂಡೆಂಟ್ ಎಂ.ಹೆಚ್. ಆಶಾಖಾನ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.