ETV Bharat / state

ನಮ್ಮ ಕಾಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲೆರ ಅದೃಷ್ಟ: ಡಿಸಿಎಂ ಅಶ್ವತ್ಥ ನಾರಾಯಣ - ರಾಮ ಮಂದಿನ ನಿರ್ಮಾಣ ಕಾರ್ಯಕ್ಕೆ ದೇಣಿಗೆ ನೀಡಲು ಡಿಸಿಎಂ ಮನವಿ

ರಾಮನಗರದ ಕುದೂರಿನಲ್ಲಿ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಅಯೋಧ್ಯೆಯಲ್ಲಿ ಆದರ್ಶ ದೈವ ಶ್ರೀರಾಮಚಂದ್ರನ ಮಂದಿರ ನಿರ್ಮಾಣ ಆಗುತ್ತಿರುವುದು ಅದೃಷ್ಟವೇ ಸರಿ. ಆ ಮಂದಿರ ಆದಷ್ಟು ಬೇಗ ನಮ್ಮೆಲ್ಲರ ಕಣ್ಮುಂದೆ ಸಾಕ್ಷಾತ್ಕಾರವಾಗಲಿ ಎಂದರು.

author img

By

Published : Feb 6, 2021, 4:31 AM IST

ರಾಮನಗರ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ರಾಜ್ಯದ ಪ್ರತಿಯೊಬ್ಬರೂ ಉದಾರವಾಗಿ ದೇಣಿಗೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣ ಮನವಿ ಮಾಡಿದರು.ರಾಮ ಮಂದಿರ ಎಂಬುದು ನಮ್ಮ ರಾಷ್ಟ್ರೀಯ ಶ್ರದ್ಧೆ, ನಂಬಿಕೆ, ಪ್ರತಿಯೊಬ್ಬ ಹಿಂದೂವಿಗೂ ಈ ಮಂದಿರ ಪರಮ ಪವಿತ್ರ ಎಂದು ಅವರು ಹೇಳಿದರು.

ರಾಮನಗರದ ಕುದೂರಿನಲ್ಲಿ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಅಯೋಧ್ಯೆಯಲ್ಲಿ ಆದರ್ಶ ದೈವ ಶ್ರೀರಾಮಚಂದ್ರನ ಮಂದಿರ ನಿರ್ಮಾಣ ಆಗುತ್ತಿರುವುದು ಅದೃಷ್ಟವೇ ಸರಿ. ಆ ಮಂದಿರ ಆದಷ್ಟು ಬೇಗ ನಮ್ಮೆಲ್ಲರ ಕಣ್ಮುಂದೆ ಸಾಕ್ಷಾತ್ಕಾರವಾಗಲಿ ಎಂದರು.

ಡಿಸಿಎಂ ಅಶ್ವತ್ಥನಾರಾಯಣ

ಶ್ರೀರಾಮರು ನಮ್ಮ ಪಾಲಿಗೆ ದೈವವಷ್ಟೇ ಅಲ್ಲ, ನಮ್ಮೆಲ್ಲರನ್ನೂ ಆದರ್ಶ ಮಾರ್ಗದಲ್ಲಿ ಮುನ್ನೆಡೆಸುವ ಶಕ್ತಿ. ಆ ಶ್ರೀರಾಮನ ತತ್ವದಡಿಯಲ್ಲಿ ನಮ್ಮ ದೇಶ ನಡೆಯುತ್ತಿದೆ. ಹಿರಿಯರು, ಮಹಿಳೆಯರು, ಮಕ್ಕಳೆನ್ನದೇ ಸಮಾಜದ ಪ್ರತಿಯೊಬ್ಬರು ಮಂದಿರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಇದು ದೇಶದಲ್ಲಿ ಅಭಿಯಾನವಾಗಿ ಬದಲಾಗಿದ್ದು, ನಮ್ಮ ಶ್ರದ್ಧೆ- ಭಕ್ತಿಯ ಪಾವಿತ್ರ್ಯತೆ ಅನಾವರಣಗೊಳ್ಳಲಿದೆ. ಪ್ರತಿಯೊಬ್ಬರೂ ರಾಮ ಸೇವಕರಾಗಿ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಕಾಣಿಕೆ ನೀಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.