ETV Bharat / state

ಯಾವುದೇ ರಾಜಕೀಯ ವಿಚಾರ ಮಾತನಾಡಲ್ಲ : ಸಿ.ಪಿ. ಯೋಗೇಶ್ವರ್

author img

By

Published : Jun 21, 2021, 3:51 PM IST

Updated : Jun 21, 2021, 4:19 PM IST

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಂಥ ಧುರೀಣರು ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದ್ರು. ಆದರೆ ಈಗ ಜನರಿಗೆ ಎಲ್ಲವೂ ಗೊತ್ತಾಗಿದೆ. ಹಾಗಾಗಿ ಜನರೇ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ. ರಾಜ್ಯದಲ್ಲಿ ಸಾವು ನೋವು ಆಗಲು ಕಾಂಗ್ರೆಸ್ಸಿಗರ ಅಪಪ್ರಚಾರ ಕಾರಣವಾಗಿದೆ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಆರೋಪಿಸಿದ್ದಾರೆ.

c-p-yogeshwar
ಸಿ ಪಿ ಯೋಗೇಶ್ವರ್

ರಾಮನಗರ: ನಾನು ಯಾವುದೇ ರಾಜಕೀಯ ವಿಚಾರ ಮಾತನಾಡಲ್ಲ ಎಂದು ತೀರ್ಮಾನ ಮಾಡಿದ್ದೇನೆ ಎಂದು ಅರುಣ್ ಸಿಂಗ್ ವರದಿ ವಿಚಾರವಾಗಿ ಸಚಿವ ಸಿ.ಪಿ. ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಅರುಣ್ ಸಿಂಗ್ ಜೊತೆಗೆ ಚರ್ಚೆ ಮಾಡಿರುವ ವಿಚಾರ ಮಾಧ್ಯಮದ ಮುಂದೆ ಮಾತನಾಡಲ್ಲ. ಅವರು ಕೊಟ್ಟಿರುವ ವರದಿ ನನಗೆ ಗೊತ್ತಿಲ್ಲ ಎಂದರು.

ಮೂರು ಜನರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ- ನನಗೆ ಗೊತ್ತಿಲ್ಲ ಪಾರ್ಟಿ ಏನ್ ಮಾಡಲಿದೆಯೋ ಅಂತಾ. ಆದರೆ ಇನ್ನು ಎರಡು ಮೂರು ದಿನ ಕಾದು ನೋಡ್ತೇನೆ ಎಂದು ತಿಳಿಸಿದರು.

ಸಚಿವ ಸಿ.ಪಿ. ಯೋಗೇಶ್ವರ್ ಮಾತನಾಡಿದರು

ಸಾಕಷ್ಟು ಅಪಪ್ರಚಾರ ಮಾಡಿದ್ರು: ಕಾಂಗ್ರೆಸ್ ನಾಯಕರು ಪಾಪದ ಮೂಟೆ ಹೊರಬೇಕಿದೆ. ವ್ಯಾಕ್ಸಿನ್ ವಿಚಾರವಾಗಿ ಸಾಕಷ್ಟು ಅಪಪ್ರಚಾರ ಮಾಡಿದ್ರು. ಈಗ ಅವರ ಮನೆಯವರೇ ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

18 ವರ್ಷ ಮೇಲ್ಮಟ್ಟವರಿಗೆ ಕೋವಿಡ್​ ವ್ಯಾಕ್ಸಿನೇಷನ್‌ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಂಥ ಧುರೀಣರು ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಿದ್ರು. ಆದರೆ ಈಗ ಜನರಿಗೆ ಎಲ್ಲವೂ ಗೊತ್ತಾಗಿದೆ. ಹಾಗಾಗಿ ಜನರೇ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ತಿದ್ದಾರೆ. ರಾಜ್ಯದಲ್ಲಿ ಸಾವು ನೋವು ಆಗಲು ಕಾಂಗ್ರೆಸ್ಸಿಗರ ಅಪಪ್ರಚಾರ ಕಾರಣವಾಗಿದೆ ಎಂದು ಆರೋಪಿಸಿದರು.

ಸಚಿವ ಸಿ.ಪಿ. ಯೋಗೇಶ್ವರ್ ಮಾತನಾಡಿದರು

ಓದಿ: ಸ್ಮಗ್ಲಿಂಗ್ ಚಿನ್ನ ಕಳ್ಳತನ ಪ್ರಕರಣ: ನಿಕಟಪೂರ್ವ ಐಜಿಪಿ, ಡಿವೈಎಸ್‍ಪಿ ಸೇರಿ ಹಲವರಿಗೆ ಸಿಐಡಿ ನೋಟಿಸ್

Last Updated : Jun 21, 2021, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.