ರಾಮನಗರ: ನಾನು ಬಿಜೆಪಿಗೂ ಹೋಗಲ್ಲ, ಜೆಡಿಎಸ್ಗೂ ಹೋಗಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಇಲ್ಲೇ ಸಂಘಟನೆ ಮಾಡ್ತೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದರು.
ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಪಂಚಾಯ್ತಿವಾರು ಚುನಾವಣಾ ಸಭೆ ಮಾಡಲಾಗುತ್ತದೆ. ಕಳೆದ ಬಾರಿಯ ಸೋಲಿನ ಅವಲೋಕನ ಆಗ್ತಿದೆ. ಪಕ್ಷ ಸಂಘಟನೆಗಾಗಿ ಚಿಂತನ-ಮಂಥನ ಶಿಬಿರ ಪ್ರಾರಂಭವಾಗಿದೆ ಎಂದರು.
ಕಳೆದ ಚುನಾವಣೆಯಲ್ಲಿ ನಾನು ಸೋತರೂ ಸಹ ಗ್ರಾಮ ಪಂಚಾಯತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಹಾಗಾಗಿ, ಪ್ರತಿ ವಾರ ಎರಡು ಪಂಚಾಯತಿ ಸಭೆ ಕರೆದು ಸಂಘಟನೆ ಮಾಡಲಾಗುವುದು. ಕಳೆದ ಬಾರಿ ಜೆಡಿಎಸ್ಗೆ ಮತ ನೀಡಿದವರು ಈಗ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅಲ್ಲದೇ, ನಮ್ಮಲ್ಲೂ ಕೂಡ ಸಣ್ಣ ಪುಟ್ಟ ಗೊಂದಲವಿದೆ. ಅದನ್ನೂ ಕೂಡ ಸರಿ ಮಾಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಸಿದ್ದಗಂಗಾ ಮಠಕ್ಕೆ ಭೇಟಿ: ಸಿದ್ಧಗಂಗಾ ಶ್ರೀಗಳ ಮೊರೆ ಹೋಗಿದ್ದ ಮಾಗಡಿ ಮಾಜಿ ಶಾಸಕ, ಪಕ್ಷಾಂತರಕ್ಕೆ ಮುಂದಾದರೇ? ಎಂಬ ಅನುಮಾನ ಮೂಡಿತ್ತು.
ಇದನ್ನೂ ಓದಿ: ಅಗ್ನಿಪಥ್ ವಿರೋಧಿಸಿ ರಾಜಭವನ ಮುತ್ತಿಗೆ ಯತ್ನ: ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ