ರಾಮನಗರ: ಬಿಡದಿ ಬಳಿಯ ಧ್ಯಾನಪೀಠಂ ಆಶ್ರಮದ ನಿತ್ಯಾನಂದ ಸ್ವಾಮೀಜಿ ಸೂರ್ಯನಿಗೆ ತಡವಾಗಿ ಬರೋಕೆ ನಾನು ಹೇಳಿದ್ದೆ ಎಂಬ ಹೇಳಿಕೆಯನ್ನು ತನ್ನ ಸವಿರಾರು ಭಕ್ತರ ಎದುರು ನೀಡಿ ಚರ್ಚೆಗೆ ಗುರಿಯಾಗಿದ್ದಾರೆ.
ತಮ್ಮ ಆಶ್ರಮದಲ್ಲಿ ಆಶೀರ್ವಚನ ನೀಡುವ ವೇಳೆ ಮಾತನಾಡಿರುವ ಅವರು, ದಿನ ಪ್ರಾರಂಭಗೊಳ್ಳುವುದೇ ಸೂರ್ಯೋದಯದಿಂದ. ಇಂದು ಯಾರೂ ಸೂರ್ಯೋದಯದ ಸಮಯ ನೋಡಿಲ್ಲ. ನಾನು ಧ್ವಜಾರೋಹಣ ಮಾಡುವುದು ಸ್ವಲ್ಪ ತಡವಾಯಿತು. ಹೀಗಾಗಿ ಸೂರ್ಯನಿಗೆ ನಾನು ಧ್ವಜಾರೋಹಣ ಮಾಡುವವರೆಗೂ ಬರಬೇಡ ಎಂದಿದ್ದೆ. ಹೀಗಾಗಿ 40 ನಿಮಿಷ ತಡವಾಗಿ ಸೂರ್ಯೋದಯವಾಗಿದೆ ಎಂಬ ಮಾತು ಈಗ ಸಾಕಷ್ಟು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿ ವಿರೋಧ ವ್ಯಕ್ತವಾಗಿದೆ.