ರಾಮನಗರ: ಜಿಲ್ಲೆಯಲ್ಲಿ ಮತಾಂತರದ ಕೂಗು ಕೇಳಿಬರುತ್ತಿದೆ. ಕನಕಪುರ ಭಾಗದಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದ ಆರೋಪಗಳು ಈಗ ಚನ್ನಪಟ್ಟಣ ಭಾಗಕ್ಕೂ ವ್ಯಾಪಿಸಿದೆ. ಅನಧಿಕೃತ ಪ್ರಾರ್ಥನಾ ಮಂದಿರ ನಿರ್ಮಾಣ ಮಾಡಿಕೊಂಡು ಮತಾಂತರಗೊಳಿಸುವ ಯತ್ನಗಳು ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
![ಹಿಂದೂಜಾಗರಣ ವೇದಿಕೆಯಿಂದ ದೂರು](https://etvbharatimages.akamaized.net/etvbharat/prod-images/r-kn-rmn-02-29112022-mathnathra-ka10051_29112022204951_2911f_1669735191_643.jpg)
ಮತಾಂತರದ ಬಗ್ಗೆ ಮತ್ತೆ ಸದ್ದು- ಕೆಲ ಸಂಸ್ಥೆಗಳಿಂದ ಪ್ರಚೋದನೆ ಮಾಡಲಾಗ್ತಿದೆ ಎಂಬ ಕೂಗು ಹೊಸದಲ್ಲ. ರಾಮನಗರ ಜಿಲ್ಲೆಯಲ್ಲಿ ಇದು ಹೆಚ್ಚಾಗಿಯೇ ಇದೆ. ಇದೀಗ ಚನ್ನಪಟ್ಟಣ ಭಾಗಕ್ಕೂ ವ್ಯಾಪಿಸಿದೆ.
ಧ್ವನಿವರ್ಧಕ ಬಳಸಿಕೊಂಡು ಪ್ರಾರ್ಥನೆ: ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಒಂದರಲ್ಲಿ ಅನಧಿಕೃತವಾಗಿ ಪ್ರಾರ್ಥನಾ ಮಂದಿರ ನಿರ್ಮಿಸಿ ಪ್ರಾರ್ಥನೆ ಮಾಡುವ ಮುಖಾಂತರ ಮತಾಂತರಕ್ಕೆ ಪ್ರಚೋದನೆ ನೀಡಲಾಗುತ್ತಿದೆ. ಜೊತೆಗೆ ಹೆಚ್ಚಿನ ಶಬ್ದ ಉಂಟುಮಾಡುವ ಧ್ವನಿವರ್ಧಕ ಬಳಸಿಕೊಂಡು ಪ್ರಾರ್ಥನೆ ಮಾಡಲಾಗುತ್ತಾ ಇದೆ. ಇದರಿಂದ ಪಕ್ಕದ ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
![ಹಿಂದೂಜಾಗರಣ ವೇದಿಕೆಯಿಂದ ದೂರು](https://etvbharatimages.akamaized.net/etvbharat/prod-images/r-kn-rmn-02-29112022-mathnathra-ka10051_29112022204951_2911f_1669735191_869.jpg)
ದೂರು: ಇನ್ನು ಫಾರ್ಮ್ ಹೌಸ್ನಲ್ಲಿ ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮತಾಂತರ ನಡೆಯುತ್ತಿದೆ ಎಂದು ನಿನ್ನೆ ಫಾರ್ಮ್ ಬಳಿ ಜಮಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿ ಲಿಖಿತ ದೂರು ನೀಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆ ಎಂ. ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ.
ಓದಿ: ಬಲವಂತದ ಮತಾಂತರ ಆರೋಪ: ಪ್ರಾರ್ಥನಾ ಸ್ಥಳದ ಮೇಲೆ ಹಿಂದೂ ಸಂಘಟನೆಗಳ ದಾಳಿ, ಕ್ರಮಕ್ಕೆ ಆಗ್ರಹ